ಬಿರುಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸಿದ್ರೆ ಸಮಸ್ಯೆ ಆಗಲ್ಲ: ಇಂಡಿಯನ್‌ ಆಯಿಲ್‌ ಸ್ಪಷ್ಟನೆ

Public TV
1 Min Read
indian oil

– ಫುಲ್‌ ಟ್ಯಾಂಕ್‌ ಮಾಡಿಸಬೇಡಿ ಎಂದು ಹರಿದಾಡುತ್ತಿರುವುದು ಸುಳ್ಳು ಸುದ್ದಿ

ನವದೆಹಲಿ: ಬಿರುಬೇಸಿಗೆಯಲ್ಲಿ ವಾಹನಗಳಿಗೆ ಫುಲ್‌ ಟ್ಯಾಂಕ್‌ ಪೆಟ್ರೋಲ್‌, ಡೀಸೆಲ್‌ ಹಾಕಿಸಬೇಡಿ ಎಂದು ವಾಹನ ಸವಾರರಿಗೆ ಇಂಡಿಯನ್‌ ಆಯಿಲ್‌ (Indian Oil) ಕಂಪನಿ ಎಚ್ಚರಿಕೆ ನೀಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಕಂಪನಿ ಸ್ಪಷ್ಟಪಡಿಸಿದೆ.

indian oil

ಆಟೋಮೊಬೈಲ್ ತಯಾರಕರು ಕಾರ್ಯಕ್ಷಮತೆಯ ಅಗತ್ಯತೆ ಮತ್ತು ಅಂತರ್ನಿರ್ಮಿತ ಸುರಕ್ಷತಾ ಅಂಶಗಳೊಂದಿಗೆ ಸುತ್ತುವರಿದ ಪರಿಸ್ಥಿತಿಗಳ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾಹನಗಳನ್ನು ವಿನ್ಯಾಸಗೊಳಿಸುತ್ತಾರೆ. ಪೆಟ್ರೋಲ್/ಡೀಸೆಲ್ ವಾಹನಗಳಿಗೆ ಇಂಧನ ಟ್ಯಾಂಕ್‌ನಲ್ಲಿ ಸೂಚಿಸಲಾದ ಗರಿಷ್ಠ ಪರಿಮಾಣವು ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಚಳಿಗಾಲ ಅಥವಾ ಬೇಸಿಗೆಯನ್ನು ಲೆಕ್ಕಿಸದೆ ತಯಾರಕರು ನಿರ್ದಿಷ್ಟಪಡಿಸಿದ ಗರಿಷ್ಠ ಮಿತಿಯವರೆಗೆ ವಾಹನಗಳಲ್ಲಿ ಇಂಧನ ತುಂಬುವುದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹೆದರಬೇಡಿ, ಹೆದರಿ ಓಡಿಹೋಗ್ಬೇಡಿ – ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ ಮೋದಿ

petrol machine 2

ಬೇಸಿಗೆಯಲ್ಲಿ ಫುಲ್‌ ಟ್ಯಾಂಕ್‌ ಪೆಟ್ರೋಲ್‌, ಡೀಸೆಲ್‌ ತುಂಬಿಸಬೇಡಿ ಎಂದು ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಗ್ಯಾಸ್ ಹೊರಹೋಗಲು ಟ್ಯಾಂಕ್‌ನಲ್ಲಿ ಜಾಗವಿರುತ್ತದೆ. ಇಂಧನವು ಉಷ್ಣತೆಯ ವ್ಯತ್ಯಾಸಗಳೊಂದಿಗೆ ವಿಸ್ತರಿಸುವುದು ಮತ್ತು ಸಂಕುಚಿತಗೊಳ್ಳುವುದು ಆಗುತ್ತದೆ. ಅದು ಬೆಂಕಿ ಸಂಪರ್ಕಕ್ಕೆ ಬರದ ಹೊರತು ಎಂದಿಗೂ ಸ್ವತಃ ಸ್ಫೋಟಗೊಳ್ಳುವುದಿಲ್ಲ. ಆಧುನಿಕ ಇಂಧನ ಟ್ಯಾಂಕ್‌ಗಳನ್ನು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದನ್ನು ವಾಹನ ಚಾಲಕರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ಪುಣೆ (ಪಿಡಿಎಪಿ) ಅಧ್ಯಕ್ಷ ಧ್ರುವ್ ರೂಪಾರೆಲ್ ತಿಳಿಸಿದ್ದಾರೆ.

ಕಂಪನಿ ಅಥವಾ ಸರ್ಕಾರಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗದ ಯಾವುದೇ ವೈರಲ್‌ ಸುದ್ದಿಗಳನ್ನು ಜನರು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 200 ಮಂದಿ ಪಾಕಿಸ್ತಾನಿಗಳು ಇಂದು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ

Share This Article