ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಮಕ್ಕಳಲ್ಲಿ ವೈರಲ್ ಫೀವರ್, ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ವೈರಾಣು ಕಾಣಿಸಿಕೊಳ್ಳುತ್ತಿದ್ದು, ಪೋಷಕರಲ್ಲಿ ಆತಂಕ ಉಂಟು ಮಾಡಿದೆ.
Advertisement
ಡೆಂಗ್ಯೂ, ವೈರಲ್ ಫೀವರ್ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಯ ಸಾವಿರಾರು ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಂಡಿದೆ. 15 ದಿನಗಳಿಂದಿಚೆಗೆ ವೈರಾಣು ಅಬ್ಬರ ಹೆಚ್ಚಾಗಿದೆ. ಚಿಕಿತ್ಸೆಗಾಗಿ ದಾವಣಗೆರೆಗೆ ದಿನಕ್ಕೆ ಸಾವಿರಕ್ಕೂ ಅಧಿಕ ಮಕ್ಕಳು ಬರುತ್ತಿದ್ದಾರೆ. RSV (Respiratory syncytial virus ) ವೈರಾಣುವಿನಿಂದ ಏಕಕಾಲಕ್ಕೆ ಬ್ರಾಂಕ್ಯುಲೈಟಿಸ್, ವೈರಲ್ ವ್ಹೀಜಿಂಗ್, ವೈರಲ್ ನ್ಯುಮೋನಿಯಾ ಇವುಗಳ ಜೊತೆ ಡೆಂಗ್ಯೂ ಸೋಂಕು ಆತಂಕ ಎದುರಾಗಿದೆ. ಇದನ್ನೂ ಓದಿ: ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ: ಸಿದ್ದರಾಮಯ್ಯ
Advertisement
Advertisement
ಕಳೆದ ವರ್ಷಕ್ಕಿಂತ ಈ ಬಾರಿ ಕಾಯಿಲೆ ಅಧಿಕವಾಗಿದೆ. 3 ವರ್ಷದೊಳಗಿನ ಮಕ್ಕಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಮಕ್ಕಳನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಎಸ್.ಎಸ್. ಹೈಟೆಕ್‍ನ ಐಸಿಯುನಲ್ಲಿ 65 ಮಕ್ಕಳು ದಾಖಲಾಗಿದ್ದಾರೆ. ಎಸ್.ಎಸ್. ಹೈಟೆಕ್‍ನಲ್ಲಿ 116, ಬಾಪೂಜಿಯಲ್ಲಿ 97, ಜಿಲ್ಲಾಸ್ಪತ್ರೆಯಲ್ಲಿ 27, ಒಟ್ಟು 236 ಮಕ್ಕಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಮಕ್ಕಳ ಚಿಕಿತ್ಸೆಗೆ ಮುಂಜಾಗ್ರತಾ ಕ್ರಮವಾಗಿ ಬೆಡ್‍ಗಳ ಸಂಖ್ಯೆ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗಳ ಸೂಚನೆ ನೀಡಿದೆ. ಪ್ರತಿ ಎರಡು ದಿನಕ್ಕೊಮ್ಮೆ ಜಿಲ್ಲಾಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪರಿಶೀಲನೆ ನಡೆಸುತ್ತಿದ್ದಾರೆ.