– ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
– ಕಾಂಗ್ರೆಸ್ ಬಡವರ ಪರ ಇದೆ
– ಸರ್ಕಾರ ಜನರ ರಕ್ತಿ ಹೀರುತ್ತಿದೆ
– ಮೋದಿ ಅವಧಿಯಲ್ಲಿ ಹತ್ತು ಪಟ್ಟು ಬೆಲೆ ಏರಿಕೆ
ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಇಂದು ಟಾಂಗಾ ರ್‍ಯಾಲಿ ಮಾಡಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋವರೆಗೂ ನಮ್ಮ ಹೋರಾಟ ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ. ಬಿಜೆಪಿಯವರು ಎಂದೂ ಜನಪರವಲ್ಲ ಎಂದು ಬೆಲೆ ಏರಿಕೆ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.
ಅಧಿವೇಶನಕ್ಕೆ ತೆರಳುವ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಇಂದು ಬೆಲೆ ಏರಿಕೆ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಇದು ಮೂರನೇ ದಿನದ ಹೋರಾಟವಾಗಿದೆ ಮೊದಲನೇ ದಿನ ಎತ್ತಿನ ಗಾಡಿಯಲ್ಲಿ ಪ್ರತಿಭಟನೆ, 2ನೇ ದಿನ ಸೈಕಲ್‍ನಲ್ಲಿ. ಇಂದು ಟಾಂಗಾ ಗಾಡಿಯಲ್ಲಿ ಬಂದು ಪ್ರತಿಭಟನೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಬದುಕಿಗೆ ಬೆಂಕಿ ಇಟ್ಟಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ. ಬಿಜೆಪಿಯವರು ಎಂದೂ ಜನಪರವಲ್ಲ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಜನರ ಹಾದಿ ತಪ್ಪಿಸುವುದೇ ಇವರ ಕೆಲಸ ಲಜ್ಜೆಗೆಟ್ಟವರು ಇವರು ಭಂಡರು. ನಿಜವಾಗಿಯೂ ರೈತರ ಪರ, ಬಡವರ ಪರ ಇದ್ದರೆ ಕನಿಷ್ಠ 10 ರೂಪಾಯಿ ಕಡಿಮೆ ಮಾಡಿ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 2ರಿಂದ ತಿಂಗಳು ಪೂರ್ತಿ ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ. ಮೋದಿ ಬಂದ್ಮೇಲೆ ಅಗತ್ಯವಸ್ತುಗಳು ಗಗನಕ್ಕೆ ಏರಿದೆ. ಮನೆಗಳ ಮೇಲೆ ಬೆಂಕಿ ಬಿದ್ದಿದ್ದೆ. ಮಧ್ಯಮವರ್ಗದ ಜನರ ಬದಕು ದುಸ್ತರವಾಗಿದೆ. ಬೆಲೆ ಏರಿಕೆಯಿಂದ ಇಡೀ ಜೀವನ ಅಸ್ತವ್ಯಸ್ತವಾಗಿದೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಈ ರೀತಿಯ ಏರಿಕೆ ಕಂಡಿರಲಿಲ್ಲ. ಈಗ ಪೆಟ್ರೋಲ್ ಡಿಸಲ್ ಗ್ಯಾಸ್ ಎಲ್ಲಾ 10 ರಷ್ಟು ಏರಿಕೆ ಆಗಿದೆ. ಆದರೆ ಇವರು ಮಾತ್ರ ಅಚ್ಚೇ ದಿನ್ ಆಯೇಗ ಅಂತ ಹೇಳಿದರು ವಾಗ್ದಾಳಿ ಮಾಡಿದ್ದಾರೆ.
ಮನೆಯಲ್ಲಿ ಹೆಂಡತಿ ಚಿನ್ನದ ಸರ ಅಡ ಇಡುವ ಪರಿಸ್ಥಿತಿ ಬಂದಿದೆ. ಇದರಿಂದ ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಕಾರ್ಪೊರೇಟ್ ಕಂಪನಿಯ ಇರ್ತಾರೆ. ಕಾಂಗ್ರೆಸ್ ಬಡವರ ಪರ ಇದೆ. ರೈತರು ಸಾಮನ್ಯ ವರ್ಗದವರ ಧ್ವನಿಯಾಗಿ ಪ್ರತಿಭಟನೆ ಮಾಡ್ತಿದ್ದೇವೆ. ಈ ಸರ್ಕಾರ ಕಿತ್ತ ಹಾಕುವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇದ್ದ ಹಾಗೇ. ಸಾಮಾನ್ಯ ಜನರು ಮತ್ತು ರೈತರನ್ನ ದಾರಿ ತಪಿಸುವ ಕೆಲಸ ಬಿಜೆಪಿ ಮಾಡುತ್ತಿದ್ದಾರೆ. ಒಂದು ವೇಳೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ನಾವು 10 ರೂಪಾಯಿ ಕಡಿಮೆ ಮಾಡುತ್ತಿದ್ದೇವು. ಬಿಜೆಪಿಯವರು ಲಜ್ಜಗೆಟ್ಟವರು ಬಂಡೆಗೆಟ್ಟವರು ದಪ್ಪ ಚರ್ಮದವರು. ಮಾನಮಾರ್ಯದೆ ಇಲ್ಲದವರು ಬಿಜೆಪಿಯವರು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.