ಮುಂದುವರಿದ ಹಿಂಸಾಚಾರ – ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಶಿ ತರೂರ್ ಕರೆ

Public TV
1 Min Read
shashi tharoor

ಇಂಫಾಲ: ಕಳೆದ ಹಲವು ದಿನಗಳಿಂದ ಈಶಾನ್ಯ ಭಾಗದ ರಾಜ್ಯ ಮಣಿಪುರದಲ್ಲಿ ಹಿಂಸಾಚಾರ (Manipur Violence) ಮುಂದುವರಿಯುತ್ತಲೇ ಇದ್ದು, ಇದೀಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ (President’s Rule) ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಭಾನುವಾರ ಕರೆ ನೀಡಿದ್ದಾರೆ.

Manipur Violence 1

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ತರೂರ್, ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಂತೆ ಬಲ ಚಿಂತನೆಯುಳ್ಳ ಭಾರತೀಯರು ತಮಗೆ ಭರವಸೆ ನೀಡಿದ್ದ ಉತ್ತಮ ಆಡಳಿತಕ್ಕೆ ಏನಾಯ್ತು ಎಂಬುದನ್ನು ತಮಗೆ ತಾವೇ ಕೇಳಿಕೊಳ್ಳಬೇಕು. ಮಣಿಪುರದ ಮತದಾರರು ತಮ್ಮ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕೇವಲ 1 ವರ್ಷದ ಬಳಿಕ ದೊಡ್ಡ ದ್ರೋಹವನ್ನು ಅನುಭವಿಸುತ್ತಿದ್ದಾರೆ. ಆಯ್ಕೆಯಾಗಿರುವುದಕ್ಕೆ ಕಾರಣವಾದ ಕೆಲಸಗಳನ್ನೇ ರಾಜ್ಯ ಸರ್ಕಾರ ಮಾಡಲು ಸಿದ್ಧವಾಗಿಲ್ಲ. ಇದೀಗ ರಾಷ್ಟ್ರಪತಿಗಳು ಆಳ್ವಿಕೆ ನಡೆಸಲು ಸಮಯ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ – ಪಾಕಿಸ್ತಾನ ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆ ನಿರ್ಣಯದಂತೆ ಬಗೆಹರಿಸಬೇಕು: ಚೀನಾ

ಬುಧವಾರ ಮಣಿಪುರದ ಆದಿವಾಸಿಗಳು ಹಾಗೂ ಬಹುಸಂಖ್ಯಾತ ಮೈತೆ ಸಮುದಾಯಕ್ಕೆ ಸೇರಿದ ಜನರ ನಡುವೆ ಹಿಂಸಾತ್ಮಕ ಘರ್ಷಣೆ ಪ್ರಾರಂಭವಾಯಿತು. ಪರಿಣಾಮ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ಘರ್ಷಣೆಯಲ್ಲಿ 54 ಜನರು ಸಾವನ್ನಪ್ಪಿದ್ದಾರೆ.

ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಶನಿವಾರ ರಾಜ್ಯದಲ್ಲಿ ಶಾಂತಿಯ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿ ಸಮಿತಿಯನ್ನು ರಚಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಜ್ಜಿ ಗೆದ್ದಿದ್ದ ತೆಲಂಗಾಣದ ಮೇದಕ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧೆ?

Share This Article