ಹುಬ್ಬಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ರಾಷ್ಟ್ರಧ್ವಜಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
Advertisement
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಬ್ಬಳ್ಳಿ ಬೆಂಗೇರಿಯ ಧ್ವಜ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡುವ ನಿಟ್ಟಿನಲ್ಲಿ, ಘಟಕದಲ್ಲಿ ಪೊಲೀಸರು ಭದ್ರತಾ ಕಾರ್ಯನಿರ್ವಹಿಸಲು ಆಗಮಿಸಿದ್ದರು. ಧ್ವಜ ತಯಾರಿಕಾ ಘಟಕಕ್ಕೆ ಯಾರೇ ಆದರೂ ಚಪ್ಪಲಿ, ಶೂ ಹಾಕಿಕೊಂಡು ಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ. ಅಲ್ಲದೆ ಇದು ಧ್ವಜ ನೀತಿ ಸಂಹಿತೆ ಸಹ ಆಗಿದೆ. ಹೀಗಿದ್ದರೂ ಹುಬ್ಬಳ್ಳಿ ಪೊಲೀಸರು ಮಾತ್ರ ಶೂ ಧರಿಸಿ ಉತ್ಪಾದನಾ ಕೇಂದ್ರಕ್ಕೆ ತೆರಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ಮಸೀದಿ ಪ್ರವೇಶಿಸಿ ತನ್ನ ಮದುವೆಗೆ ಸಾಕ್ಷಿಯಾದ ವಧು – ಕೇರಳದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ
Advertisement
Advertisement
ರಾಷ್ಟ್ರಧ್ವಜದ ಗೌರವ, ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಇಲ್ಲಿ ಪಾದರಕ್ಷ, ಶೂ ನಿಷೇಧ ಮಾಡಲಾಗಿದೆ. ಇದು ತಿಳಿದಿದ್ದರೂ ಡಿಸಿಪಿ ಸಾಹಿಲ್ ಬಾಗ್ಲಾ, ಸೌತ್ ಎಸಿಪಿ ಆರ್.ಕೆ. ಪಾಟೀಲ್, ಪಿಐ ಬಸವರಾಜ್ ಕಾಮನಬೈಲ್ ಬೂಟುಗಾಲಲ್ಲಿ ಒಳ ಪ್ರವೇಶಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕೇಸ್ – ಅಪರಾಧ ಎಸಗಿದವರಿಗೆ ಕಠಿಣ ಕ್ರಮ: ಶಾ ಭರವಸೆ