– 500 ರೂ. ನೋಟುಗಳ ಕಂತೆ ತೋರಿಸಿ ಭಾವುಕರಾದ ಕುಸ್ತಿಪಟು
ನವದೆಹಲಿ: ರಕ್ಷಾ ಬಂಧನ (Raksha Bandhan) ದಿನದಂದು ಕುಸ್ತಿಪಟು ವಿನೇಶ್ ಫೋಗಟ್‌ಗೆ (Vinesh Phogat) ಸಹೋದರ ವಿಶೇಷ ಉಡುಗೊರೆ ನೀಡಿದ್ದಾರೆ. ಅಣ್ಣನ ಗಿಫ್ಟ್ ಕುರಿತು ವಿನೇಶ್ ಭಾವುಕ ಕ್ಷಣದ ಪೋಸ್ಟ್ ಹಾಕಿದ್ದಾರೆ.
ವಿನೇಶ್, 500 ರೂ. ಮುಖಬೆಲೆ ನೋಟುಗಳ ಕಂತೆ ಹಿಡಿದಿರುವ ವಿಶೇಷ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಭಾರತದ ಸ್ಟಾರ್ ರೆಸ್ಲರ್ ವಿನೇಶ್ ಫೋಗಟ್‌ಗೆ ಚಿನ್ನದ ಪದಕ!
Charkhi Dadri, Haryana: Wrestler Vinesh Phogat celebrates Raksha Bandhan with her brother in their village Balali pic.twitter.com/YgahqHmDPq
— IANS (@ians_india) August 19, 2024
‘ನನಗೆ ಹತ್ತಿರತ್ತಿರ 30 ವರ್ಷ. ಕಳೆದ ವರ್ಷ ಅಣ್ಣ ನನಗೆ 500 ರೂ. ನೀಡಿದ್ದ. ಈಗ, ಇಲ್ಲಿವರೆಗೆ ತಾನು ದುಡಿದು ಕೂಡಿಟ್ಟಿದ್ದ ಹಣವನ್ನು ಅಣ್ಣ ನನಗೆ ನೀಡಿದ್ದಾನೆ ಎಂದು ನೋಟಿನ ಕಂತೆಯನ್ನು ತೋರಿಸುತ್ತಾ ಕುಸ್ತಿಪಟು ಹೇಳಿಕೊಂಡಿದ್ದಾರೆ. ಈ ವೇಳೆ ಸಹೋದರ ಕೂಡ ಜೊತೆಗಿದ್ದಾರೆ. ಆ ವೀಡಿಯೋ ವೈರಲ್ ಆಗಿದೆ.
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಮರಳಿದ ವಿನೇಶ್ ಫೋಗಟ್‌ಗೆ ದೇಶಾದ್ಯಂತ ಪ್ರೀತಿಯ ಸ್ವಾಗತ ಸಿಕ್ಕಿದೆ. ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡು ಪದಕ ವಂಚಿತರಾಗಿ ವಾಪಸ್ ಆದರು. ಆದರೆ ಕ್ರೀಡಾಕೂಟದಲ್ಲಿನ ಉತ್ತಮ ಪ್ರದರ್ಶನದಿಂದ ದೇಶದ ಜನರ ಮನಗೆದ್ದಿದ್ದಾರೆ. ಹೀಗಾಗಿ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಫೋಗಟ್‌ಗೆ ಅದ್ದೂರಿ ಸ್ವಾಗತ ದೊರೆಯಿತು. ಇದನ್ನೂ ಓದಿ: ಭಾರತಕ್ಕೆ ಮರಳಿದ ವಿನೇಶ್ ಫೋಗಟ್‌ಗೆ ಅದ್ಧೂರಿ ಸ್ವಾಗತ
ವಿನೇಶ್ ಕುಟುಂಬ ವಾಸಿಸುವ ಬಬಾಲಿಗೆ ಹೋಗುವ ಹಾದಿಯುದ್ದಕ್ಕೂ ಕುಸ್ತಿಪಟುವನ್ನು ಜನರ ಸನ್ಮಾನಿಸಿದರು. ಸೋಮವಾರ ವಿನೇಶ್ ಫೋಗಟ್ ರಕ್ಷಾ ಬಂಧನ ಆಚರಿಸಿದ್ದಾರೆ.