ಚಿಕ್ಕಮಗಳೂರು: ಮಂಗಳಮುಖಿಯರ ಪಾದಪೂಜೆ ಮಾಡುವ ಮೂಲಕ ಅವಧೂತ ವಿನಯ್ ಗುರೂಜಿ ದೀಪಾವಳಿ ಹಬ್ಬವನ್ನು ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
Advertisement
ವಿನಯ್ ಗುರೂಜಿ ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತರು. ಇವರನ್ನು ಭಕ್ತರು ನಡೆದಾಡುವ ದೈವ ಎಂದೇ ಕರೆಯುತ್ತಾರೆ. ಅವರು ಇಂದು ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಮಂಗಳಮುಖಿಯರಿಗೆ ಪಾದಪೂಜೆ ಮಾಡಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಇದೇ ವೇಳೆ, 150ಕ್ಕೂ ಹೆಚ್ಚು ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು. ಬಡವರಿಗೆ ಕಿಟ್ ವಿತರಿಸುವ ಮುನ್ನ ಅವರಿಗೆ ಸ್ವತಃ ವಿನಯ್ ಗುರೂಜಿಯೇ ಮಂಗಳಾರತಿ ಮಾಡಿ ಬಳಿಕ ಅವರಿಗೆ ಕಿಟ್ ವಿತರಿಸಿದ್ದಾರೆ. ಇದನ್ನೂ ಓದಿ: ತೈಲ ಬೆಲೆ ಇಳಿಕೆ ಬೆನ್ನಲ್ಲೇ ದುಬಾರಿಯಾಗಲಿದೆ ಹೋಟೆಲ್ ಫುಡ್
Advertisement
Advertisement
ವಿನಯ್ ಗುರೂಜಿ ಪ್ರತಿಯೊಂದು ಹಬ್ಬವನ್ನೂ ವಿಭಿನ್ನವಾಗಿ ಆಚರಿಸುತ್ತಾರೆ. ಕಳೆದ ವರ್ಷ ಕನ್ನಡ ರಾಜ್ಯೋತ್ಸವದಂದು ಕೊಪ್ಪ ಬಸ್ ನಿಲ್ದಾಣದಲ್ಲಿ ಕಸ ಗುಡಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದ್ದರು. ಗಾಂಧಿ ಜಯಂತಿಯಂದು ಶೌಚಾಲಯ ಶುಚಿ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಿದ್ದರು. ವಿನಯ್ ಗುರೂಜಿ ಪ್ರತಿವರ್ಷವೂ ಒಂದೊಂದು ಹಬ್ಬವನ್ನು ಒಂದೊಂದು ರೀತಿ ವಿಭಿನ್ನವಾಗಿ ಆಚರಿಸುತ್ತಾರೆ. ಈ ದಿನದ ಕಾರ್ಯಕ್ರಮದಲ್ಲಿ ಮಠದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Advertisement
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ರಾಜ್ಯದ ಬಹುತೇಕ ರಾಜಕಾರಣಿಗಳು ಇವರ ಪರಮ ಭಕ್ತರಾಗಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಪ್ರಧಾನಿ ದೇವೇಗೌಡರು, ವಿನಯ್ ಗುರೂಜಿಗೆ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ನ.8 ರಿಂದ ಅಂಗನವಾಡಿ ಕೇಂದ್ರಗಳು ರೀ ಓಪನ್