ಚಿಕ್ಕಮಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರು ನಿಗೂಢವಾಗಿ ನಾಪತ್ತೆಯಾಗಿ ಸಾವನ್ನಪ್ಪುವ ಮುನ್ನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿನಯ್ ಗುರೂಜಿ (Vinay Guruji) ಅವರ ಆಶ್ರಮಕ್ಕೆ ಬಂದಿದ್ದರು. ಈ ವೇಳೆ ವಿನಯ್ ಗುರೂಜಿ ಕೂಡ ಭೇಟಿಯಾಗಿದ್ದರು.
Advertisement
ಆಶ್ರಮದ ಭಕ್ತನಾಗಿದ್ದ ಚಂದ್ರು (Chandrashekhar) ವಿಗೆ ವಿನಯ್ ಗುರೂಜಿ ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಆಶ್ರಮದಲ್ಲಿದ್ದ ಚಂದ್ರು ಹಾಗೂ ಕಿರಣ್ ಗೆ ಕೈಗೆ ಒಂದು ಹಣ್ಣನ್ನು ನೀಡಿ ಟೈಂ ಆಗಿದೆ. ಹುಷಾರಾಗಿ ಹೋಗಿ ಎಂದಿದ್ದರು. ಚಂದ್ರು ಸಾವು ವಿನಯ್ ಗುರೂಜಿಗೂ ಕೂಡ ನೋವು ತಂದಿದೆ ಎಂದು ಆಶ್ರಮದ ಸಿಬ್ಬಂದಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು. ಇದನ್ನೂ ಓದಿ: ಚಂದ್ರು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ
Advertisement
Advertisement
ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿ.ಐ.ಪಿ. ಎಂದು ಪರಿಗಣಿಸಲ್ಲ. ಚಂದ್ರು ಕೂಡ ಕಿರಣ್ ಜೊತೆ ಬಂದಿದ್ದರು, ಬರುತ್ತಿದ್ದರು. ಅವರ ಸರಳತೆ ನೋಡಿ ಇಂದು ನಮಗೆ ತುಂಬಾ ಬೇಜಾರಾಗಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ. ಆಶ್ರಮದಲ್ಲಿ ಚಂದ್ರು ಊಟ ಬಡಿಸುತ್ತಿದ್ದ, ತೆಂಗಿನಕಾಯಿ ಸುಲಿಯುತ್ತಿದ್ದ. ಆದರೆ ಇಂದು ಚಂದ್ರು ಸಾವು ನಮಗೆ ತುಂಬಾ ನೋವು ತಂದಿದೆ ಎಂದು ಸಿಬ್ಬಂದಿ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.