Bigg Boss: ವಿನಯ್‌ ಆಟಕ್ಕೆ ಬ್ರೇಕ್‌ ಹಾಕಿದ ‌’ಬಿಗ್‌ ಬಾಸ್’

Public TV
1 Min Read
vinay 1 1

ಬಿಗ್‌ ಬಾಸ್ ಕನ್ನಡ 10ನೇ ಸೀಸನ್ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ (Vinay Gowda)  ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್ (Elimination) ಚಕ್ರದ ಕುರ್ಚಿಯಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಮತ್ತು ವಿನಯ್ ಕೂತಿದ್ದರು. ತಿರುಗುಣಿ ತಿರುಗುತ್ತಿದ್ದ ಹಾಗೆಯೇ ಮೂವರ ಉಸಿರೂ ಅಷ್ಟೇ ಏರಿಳಿಯುತ್ತಿತ್ತು. ಎಲ್ಲ ಸ್ಪರ್ಧಿಗಳು ಕಣ್ಣುಮುಚ್ಚಿ ಪ್ರಾರ್ಥಿಸುತ್ತಿದ್ದರು. ಕೊನೆಗೂ ವಿನಯ್ ಎದುರಿಗೆ ಬಂದಾಗ ಮನೆಯ ಬಾಗಿಲು ತೆರೆದುಕೊಂಡಿತು. ವಿನಯ್ ಮನೆಯಿಂದ ಹೊರಬಂದಿದ್ದಾರೆ.

vinay 2

ದೊಡ್ಮನೆಯ ಆನೆ ವಿನಯ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಟಾಪ್ 2ನಲ್ಲಿ ವಿನಯ್ ಇದ್ದೇ ಇರುತ್ತಾರೆ ಎಂದು ಭಾವಿಸಿದ್ದ ಪ್ರೇಕ್ಷಕರಿಗೆ ವಿನಯ್ ಎಲಿಮಿನೇಷನ್ ಶಾಕ್ ಕೊಟ್ಟಿದೆ.‌ ಇದನ್ನೂ ಓದಿ:Bigg Boss: ಫಿನಾಲೆಯಲ್ಲಿ ಮುಗ್ಗರಿಸಿದ ಪಂತು- ವರ್ತೂರು ಸಂತೋಷ್ ಔಟ್

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಟಫ್ ಸ್ಪರ್ಧಿಯಾಗಿಯೇ ಗುರುತಿಸಿಕೊಂಡವರು ವಿನಯ್. ಸಂಗೀತಾ, ಕಾರ್ತಿಕ್ ಅಂತಹ ಸ್ಟ್ರಾಂಗ್ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟಿದ್ದಾರೆ ವಿನಯ್. ತುಕಾಲಿ ಸಂತು ಎಲಿಮಿನೇಟ್ ನಂತರ ವರ್ತೂರು ಸಂತೋಷ್, ವಿನಯ್ ಔಟ್ ಆಗಿದ್ದಾರೆ. ಟಾಪ್ 3ನೇ ಸ್ಥಾನದಲ್ಲಿ ಕಾರ್ತಿಕ್, ಪ್ರತಾಪ್‌, ಸಂಗೀತಾ ಇದ್ದಾರೆ.

Share This Article