ಚಿಕ್ಕಮಗಳೂರು: ವರುಣ ದೇವ ಮುನಿಸಿಕೊಂಡ್ರೆ ಕಪ್ಪೆ, ಕತ್ತೆಗಳ ಮದುವೆ ಮಾಡೋದು ಎಲ್ಲಾ ಕಡೆ ನಡೆಯುತ್ತದೆ. ಆದರೆ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಜನ ಹೂತಿಟ್ಟ ಶವವನ್ನು ಹೊರಗೆ ತೆಗೆದು ಸುಡುವ ವಿಶಿಷ್ಟ ಆಚರಣೆ ನಡೆಸುತ್ತಾರೆ.
ಈ ಗ್ರಾಮದ ಜನ ಮಳೆಗಾಗಿ ನಾಲ್ಕು ಹಳ್ಳಿಯ ವ್ಯಾಪ್ತಿಯಲ್ಲಿ ಕಳೆದ ಒಂದೆರೆಡು ತಿಂಗಳಲ್ಲಿ ಹೂತು ಹಾಕಿದ್ದ ಮೃತದೇಹಗಳ ತಲೆಯನ್ನ ತೆಗೆದು ಹಲ್ಲು ಹಾಗೂ ಕೂದಲಿನ ಭಾಗವನ್ನ ಕಿತ್ತು ಮೃತದೇಹದ ತಲೆಯೊಂದಿಗೆ ಕಿತ್ತ ಭಾಗವನ್ನೆಲ್ಲಾ ಬೆಂಕಿ ಹಾಕಿ ಸುಡ್ತಾರೆ. ಹೀಗೆ ಮಾಡಿದ್ರೆ ಒಂದೆರಡು ತಿಂಗಳಲ್ಲಿ ಮಳೆ ಬಂದು ಬರಗಾಲ ನಿವಾರಣೆಯಾಗುತ್ತೆ ಅನ್ನೋದು ಈ ಗ್ರಾಮದವರ ನಂಬಿಕೆಯಾಗಿದೆ. ಈ ಆಚರಣೆಯಲ್ಲಿ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಭಾಗವಹಿಸ್ತಾರೆ. ಎಲ್ಲರೂ ಒಂದುಗೂಡಿ ಆಚರಣೆ ಮಾಡುವುದರಿಂದ ಯಾರೊಬ್ಬರೂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಲ್ಲ.
Advertisement
Advertisement
ಡಂಗೂರ ಸಾರ್ತಾರೆ : ಈ ಆಚರಣೆಗೆ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಬರುವಂತೆ ಹಿಂದಿನ ದಿನ ಡಂಗೂರವನ್ನೂ ಸಾರ್ತಾರೆ. ಎಲ್ಲರೂ ಒಂದೆಡೆ ಸೇರಿ ತೀರ್ಮಾನಿಸಿದ ನಂತರವಷ್ಟೆ ಆಚರಣೆಗೆ ಸಿದ್ಧತೆ ನಡೆಯೋದು. ಕಳೆದೆರಡು ತಿಂಗಳಲ್ಲಿ ಗ್ರಾಮದಲ್ಲಿ ಯಾರ್ಯಾರು ಮೃತಪಟ್ಟಿದ್ದಾರೆ, ಅವರನ್ನ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಮಾಹಿತಿ ಕಲೆ ಹಾಕ್ತಾರೆ. ಬಳಿಕ ಎಲ್ಲರೂ ಸಮಾಧಿ ಬಳಿ ಹೋಗಿ ಶವದ ತಲೆಯನ್ನ ತೆಗೆದು ಬೆಂಕಿಗೆ ಹಾಕುತ್ತಾರೆ. ಮೃತ ದೇಹದ ತಲೆ ಬೆಂಕಿಯಲ್ಲಿ ಬೇಯುವಾಗ ಕುಣಿದು ಕುಪ್ಪಳಿಸುತ್ತಾರೆ.
Advertisement
ಈ ಆಚರಣೆ ಇವರಿಗೆ ಹಬ್ಬ: ಗ್ರಾಮದವರು ಈ ಆಚರಣೆಯನ್ನ ಹಬ್ಬವಾಗಿ ಆಚರಿಸ್ತಾರೆ. ಈ ಆಚರಣೆಗೆ ಇವರು ಇಟ್ಟ ಹೆಸರು ಗಿಡ ಸವರೋ ಹಬ್ಬ. ಈ ಹಬ್ಬ ಮಾಡಿದ್ರೆ ನಾಡಿನ ಬರಗಾಲ ಹೋಗಿ ಸಮೃದ್ಧ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತೆ ಅನ್ನೋದು ಇವ್ರ ನಂಬಿಕೆ. ಈ ಹಿಂದೆ ಬರಗಾಲ ಬಂದಾಗ ಈ ಆಚರಣೆಯ ಬಳಿಕ ಮಳೆ ಬಂದಿತ್ತು. ಈ ಬಾರಿಯೂ ಮಳೆ ಬರುತ್ತೆ ಎಂದು ಸ್ಥಳೀಯರು ಹೇಳುತ್ತಾರೆ.
Advertisement
ತೊನ್ನು ಹಾಗೂ ಇತರೆ ಕಾಯಿಲೆಯಿಂದ ಬಳಲಿ ಮೃತಪಟ್ಟವರ ಹಲ್ಲು, ಕೂದಲು ಬೆಳೆಯುತ್ತೆ. ಇದರಿಂದ ಮಳೆಯಾಗಲ್ಲ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ. ಹಾಗಾಗಿ ಊರಿನಲ್ಲಿ ಸತ್ತವರ ಸಮಾಧಿಗೆ ಹೋಗಿ ಶವ ತಂದು ಬೆಂಕಿಗೆ ಹಾಕಿ ಸುಡುತ್ತಾರೆ.