– ಮದರಸಾ ಆರಂಭಕ್ಕೆ ಅವಕಾಶ ಕೊಡಲ್ಲ; ಗ್ರಾಮಸ್ಥರ ಪರ ವಕೀಲ
ಮೈಸೂರು: ಇಲ್ಲಿನ ಕ್ಯಾತಮಾರನಹಳ್ಳಿ(Kyathamaranahalli) ವಿವಾದಿತ ಸ್ಥಳದಲ್ಲಿ ಮದರಸಾ (ಅರೇಬಿಕ್ ಶಾಲೆ) ತೆರೆಯಲು ಜಿಲ್ಲಾಧಿಕಾರಿ ಅನುಮತಿ ನೀಡಿದ ಹಿನ್ನಲೆ ಹುಲಿಯಮ್ಮ ದೇವಸ್ಥಾನ ಬಳಿ ಹಿಂದೂ ಪರ ಮುಖಂಡರು ಹಾಗೂ ಗ್ರಾಮಸ್ಥರು ಸಭೆ ನಡೆಸಿದರು.
ಸಭೆಯಲ್ಲಿ ಅರೇಬಿಕ್ ಶಾಲೆ(Arabic School) ತೆರೆಯುವುದರಿಂದ ಆಗುವ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಗ್ರಾಮಸ್ಥರ ಅಭಿಪ್ರಾಯದ ವಿರುದ್ಧವಾಗಿ ಡಿಸಿ ಆದೇಶ ನೀಡಿದ್ದಾರೆ, ಇದು ಸರಿಯಲ್ಲ. ಸದರಿ ಜಾಗ ವಸತಿ ವಲಯ, ಯಾವ ಭೂ ಪರಿವರ್ತನೆಯಾಗಿಲ್ಲ. ಇದನ್ನು ಪರಿಗಣಿಸದೇ ಶಾಲೆಗೆ ಅನುಮತಿ ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: Raichur | ಗ್ರಾನೈಟ್ ಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟ – ಓರ್ವ ಸಾವು, ಇನ್ನೋರ್ವ ಗಂಭೀರ
ಡಿಸಿ ಆದೇಶದ ವಿರುದ್ಧ ಕಾನೂನು ರೀತಿ ಹೋರಾಟಕ್ಕೆ ಗ್ರಾಮಸ್ಥರು ನಿರ್ಣಯಿಸಿದರು. ಡಿಸಿ ಅನುಮತಿಯನ್ನು ರದ್ದುಪಡಿಸಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವಿವಾದಿತ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುವುದನ್ನು ತಪ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ದೇವಸ್ಥಾನ ಬಳಿ ಸಭೆ ಸೇರಿದ್ದ ನೂರಾರು ಜನರಲ್ಲಿ, ಮಹಿಳೆಯರ ಸಂಖ್ಯೆಯೇ ಹೆಚ್ಚಿತ್ತು. ಇದನ್ನೂ ಓದಿ: ಈ ಸರ್ಕಾರ ಪೋಸ್ಟ್ ಮಾರ್ಟಂಗೂ ದರ ವಿಧಿಸಿಬಿಟ್ರೆ ಸಾಯೋದಕ್ಕೂ ಜನ ಹಿಂಜರೀತಾರೆ – ಸಿ.ಟಿ ರವಿ ಲೇವಡಿ
ಹತ್ಯೆಯಾದ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ತಾಯಿ ಚಂದ್ರಮ್ಮ ಸಭೆಯಲ್ಲಿ ಮಾತನಾಡಿ, ನನ್ನ ಮಗ ಕೊಲೆಯಾಗಿದ್ದು ಮಸೀದಿ ಕಾರಣಕ್ಕೆ ಈ ಜಾಗದಲಿ ಈಗ ಅಲ್ಲಿ ಮದರಸಾಕ್ಕೆ ಅನುಮತಿ ನೀಡಿದ್ದಾರೆ. ಇದನ್ನ ನಾವು ಒಪ್ಪುವುದಿಲ್ಲ. ಆ ಸ್ಥಳದಲ್ಲಿರುವ ಕಟ್ಟಡವನ್ನ ಹೊಡೆದು ಹಾಕಬೇಕು. ಅದನ್ನ ಹೊಡೆದು ಹಾಕದಿದ್ದರೆ ನಾನು ಮೊಮ್ಮಕ್ಕಳ ಸಮೇತ ನನ್ನ ಮಗನ ಸ್ಥಳಕ್ಕೆ ಹೋಗುತ್ತೇವೆ. ಯಾವುದೇ ಕಾರಣಕ್ಕೂ ಮದರಸಾ ತೆರೆಯಬಾರದು. ನಾನು ಈ ವಿಚಾರವಾಗಿ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾಲಕನ ಮೇಲೆ ಹಲ್ಲೆ ನಡೆಸಿ, ಚಡ್ಡಿಯೊಳಗೆ ಇರುವೆ ಬಿಟ್ಟು ವಿಕೃತಿ – ಆರೋಪಿಗಳು ಅಂದರ್
ಗ್ರಾಮಸ್ಥರ ಪರ ಕಾನೂನು ಹೋರಾಟ ಮಾಡುತ್ತಿರುವ ವಕೀಲರಾದ ಹಾಮಾ ಭಾಸ್ಕರ್ ಮಾತನಾಡಿ, ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದಲ್ಲಿ ಅರೇಬಿಕ್ ಶಾಲೆ ಆರಂಭ ಮಾಡುವ ಡಿಸಿ ಆದೇಶ ಕಾನೂನು ಬಾಹಿರ. ಇದು ಕೋಮು ಸೌಹಾರ್ದತೆ ಹಾಳು ಮಾಡುವ ಆದೇಶ. ಈ ಆದೇಶದ ವಿರುದ್ಧ ಸ್ಥಳೀಯರೆಲ್ಲಾ ಸೇರಿ ಕಾನೂನು ಹೋರಾಟ ಮಾಡುತ್ತೇವೆ. ಶಾಲೆ ಆರಂಭಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದರು.