ಚಂಡೀಗಢ: ಪಂಚಾಯತ್ ಚುನಾವಣೆಯಲ್ಲಿ (Panchayat Elections) ಸ್ಪರ್ಧಿಸಿ ಸೋತ ವ್ಯಕ್ತಿಗೆ ಗ್ರಾಮಸ್ಥರೇ ಸನ್ಮಾನ ಮಾಡಿ, 2.11 ಕೋಟಿ ರೂ. ನಗದು ಹಾಗೂ ಸ್ಕಾರ್ಪಿಯೋ ಕಾರನ್ನು ಉಡುಗೊರೆ (Gift) ನೀಡಿರುವ ಆಶ್ಚರ್ಯಕರ ಘಟನೆ ಹರಿಯಾಣದ (Haryana) ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ.
ಚಿರಿ ಗ್ರಾಮದ ನಿವಾಸಿಗಳು ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಸರಪಂಚ್ ಹುದ್ದೆಗೆ ಸ್ಪರ್ಧಿಸಿ ಸೋತ ಗ್ರಾಮಸ್ಥನಿಗೆ ಭಾರೀ ಬಹುಮಾನ ನೀಡಿದ್ದಾರೆ. ಚುನಾವಣೆಯಲ್ಲಿ ಧರಂಪಾಲ್ ಅವರು ಕೇವಲ 66 ಮತಗಳಿಂದ ಸೋತಿದ್ದರು.
Advertisement
ಶುಕ್ರವಾರ ಧರಂಪಾಲ್ ಅವರನ್ನು ಸನ್ಮಾನಿಸಲು ಗ್ರಾಮಸ್ಥರು ಅದ್ದೂರಿ ಸಮಾರಂಭವನ್ನೇ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಧರಂಪಾಲ್ ಅವರಿಗೆ ಪೇಟ ತೊಡಿಸಿ, ಹಾರ ಹಾಕಿ ಸನ್ಮಾನವನ್ನೂ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಸ್ಕೆಚ್ – ಟೈಮರ್ ಕೈಕೊಟ್ಟು ದಾರಿ ಮಧ್ಯೆ ಬಾಂಬ್ ಸ್ಫೋಟ
Advertisement
Advertisement
ಅಷ್ಟಕ್ಕೂ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಗ್ರಾಮಸ್ಥರು ಭಾರೀ ಬಹುಮಾನ ನೀಡಿದ್ದು ಆಶ್ಚರ್ಯಕರವೇ ಸರಿ. ಗ್ರಾಮದಲ್ಲಿ ಭಾವೈಕ್ಯತೆ ಕಾಪಾಡಲು ಈ ರೀತಿ ಮಾಡಿದ್ದೇವೆ. ಅಭ್ಯರ್ಥಿಯ ನೈತಿಕ ಸ್ಥೈರ್ಯ ಒಡೆಯಬಾರದು. ಅವರನ್ನು ಗೌರವಿಸಲು ಖಾಪ್ ಪಂಚಾಯತ್‌ನಲ್ಲಿ ಪ್ರಮುಖ ಹುದ್ದೆಯನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಮಸ್ಕ್ ಸಮೀಕ್ಷೆಯಲ್ಲಿ ಟ್ರಂಪ್ ಪಾಸ್ – ಮತ್ತೆ ಸ್ಥಾಪನೆಯಾಗಲಿದೆ ಟ್ವಿಟ್ಟರ್ ಖಾತೆ
Advertisement
ಧರಂಪಾಲ್ ಅವರು ಲಖನ್ ಮಜ್ರಾ ಬ್ಲಾಕ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ತಾಯಿ ಮತ್ತು ಅಜ್ಜ ಚಿರಿ ಗ್ರಾಮದ ಸರಪಂಚರಾಗಿ ಸೇವೆ ಸಲ್ಲಿಸಿದ್ದಾರೆ.