ಬೆಂಗಳೂರು: ರಾಜ್ಯ ಸರ್ಕಾರವನ್ನ 40% ಕಮಿಷನ್ ಸರ್ಕಾರ ಅಂತಾ ಕಾಂಗ್ರೆಸ್ ಪಕ್ಷ ಟೀಕೆಗಳ ಮೇಲೆ ಟೀಕೆ ಮಾಡ್ತಿರೋದು ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ (BJP Government) ಭ್ರಷ್ಟಾಚಾರದ ಸರ್ಕಾರ ಅಂತಾ ವಿಪಕ್ಷಗಳು ಆರೋಪ ಮಾಡ್ತಾನೆ ಬಂದಿದೆ. ಒಂದು ಪಹಣಿಯ ಬದಲಾವಣೆ ಮಾಡಿಸಲು ಲಕ್ಷ ಲಕ್ಷ ಹಣಕೊಟ್ಟು ಕೆಲಸವೂ ಆಗದೇ ನಮಗೆ ನಮ್ಮ ಹಣ (Money) ಕೊಡಿಸಿ ಅಂತಾ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಬೆಳಕಿಗೆ ಬಂದಿದೆ.
Advertisement
ಹೌದು. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಾಸವಾಗಿರೋ ಶ್ರೀನಿವಾಸ್, ಮೂಲತಃ ಕಗಲ್ಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉದೀಪಾಳ್ಯದ ನಿವಾಸಿ. ತಮ್ಮ ಮುತ್ತಾತನ ಹೆಸರಿನಲ್ಲಿರೋ 4 ಎಕರೆ ಜಾಗ (Property) ವನ್ನ ತಂದೆಯ ಹೆಸರಿಗೆ ಮಾಡಿಸಿ ಕುಟುಂಬದವರಿಗೆ ಹಂಚಿಕೆ ಮಾಡೋ ಪ್ಲಾನ್ ಮಾಡಿಕೊಂಡಿದ್ರು. ಶ್ರೀನಿವಾಸ್ ಅವರು ಕಗ್ಗಲಿಪುರದ ವಿಲೇಜ್ ಅಕೌಂಟೆಂಟ್ (Village Accountant) ಬಳಿ ಪಹಣಿ ಬದಲಾವಣೆ ಮಾಡಿಸಿಕೊಂಡುವಂತೆ ಕೇಳಿಕೊಂಡಿದ್ರು. ಆದರೆ ಪಹಣಿ ಬದಲಾವಣೆ ಮಾಡಿಕೊಡಲು ವಿಲೇಜ್ ಅಕೌಂಟೆಂಟ್ ಆಗಿರೋ ಮಿಸ್ಟರ್ ಶಾಂತೇಗೌಡ ಬರೋಬ್ಬರಿ 50ಲಕ್ಷ ಕೇಳಿದ್ದಾನೆ.
Advertisement
Advertisement
ಪಹಣಿ ಬದಲಾವಣೆ ಆದರೆ ಸಾಕು ಅಂತಾ ಶ್ರೀನಿವಾಸ್ ಅವರು ತಮ್ಮ ಹೆಸರಿನಲ್ಲಿದ್ದ ಜಮೀನು (Land) ಮಾರಿ 30 ಲಕ್ಷ ಅಡ್ವಾನ್ಸ್ ಅಂತಾ 2018ರಲ್ಲಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಹಣವನ್ನು ವಾಪಸ್ ನೀಡದೇ ಪಹಣಿ ಕೆಲಸವೂ ಮಾಡಿಸದೇ ಮೋಸ ಮಾಡ್ತಿದ್ದಾರೆ ಎಂದು ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ
Advertisement
ಹಣ ಕೊಡಿ ಇಲ್ವಾ ಕೆಲಸ ಮಾಡಿಕೊಡಿ ಅಂತಾ ಕೇಳಲು ಹೋದ್ರೆ ಶಾಂತೇಗೌಡ ಏನ್ ಮಾಡ್ತಿರೋ ಮಾಡ್ಕೋಳಿ ನಿಮ್ಮನ್ನ ಜೀವಂತವಾಗಿ ಉಳಿಸೋಲ್ಲ ಅಂತಾ ದಮ್ಕಿ ಕೂಡ ಹಾಕಿದ್ದರಂತೆ. ಹೇಗೋ ನಮ್ಮ ತಾತನ ಆಸ್ತಿ ಬರುತ್ತೆ ಅಂತಾ ಹಣ ಕೊಟ್ಟು ಈಗ ಜಮೀನು ಕೂಡ ಬದಲಾವಣೆ ಆಗಿದೆ ಕೊಟ್ಟ ಹಣವೂ ಇಲ್ಲದೇ ಹೇಗಪ್ಪ ಜೀವನ ಅಂತಾ ಕಷ್ಟದಲ್ಲೇ ಕಾಲ ಕಳೆಯುವಂತೆ ಆಗಿದೆ ಶ್ರೀನಿವಾಸ್ ಪತ್ನಿ ಹೇಳುತ್ತಾರೆ.
ಒಟ್ಟಿನಲ್ಲಿ ಒಬ್ಬ ಸಾಮಾನ್ಯ ವಿಲೇಜ್ ಅಕೌಂಟೆಂಟ್ ಹೀಗೆ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾನೆ ಅಂದ್ರೇ ಹೇಗಿದೆ ನಮ್ಮ ವ್ಯವಸ್ಥೆ ಅನ್ನೋದು ಗೊತ್ತಾಗ್ತಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.