ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ವಾಹನ ಸವಾರರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ. ನೂತನ ಪಾರ್ಕಿಂಗ್ ನೀತಿಯನ್ನು ಜಾರಿಗೆ ತಂದು ಟೆಂಡರ್ ಪ್ರಕ್ರಿಯೆಗೆ ಬಿಬಿಎಂಪಿ ಚಾಲನೆ ನೀಡಿದೆ. ಇದನ್ನ ಜನ ತೀವ್ರವಾಗಿ ವಿರೋಧಿಸುತ್ತಿದ್ದು, ಬಿಬಿಎಂಪಿಯ ರೂಲ್ಸ್ ಗೆ ಆಕ್ರೋಶಗೊಂಡಿದ್ದಾರೆ.
Advertisement
ಹೌದು, ಬಿಬಿಎಂಪಿ (BBMP) ತನ್ನ ವ್ಯಾಪ್ತಿ ಯಲ್ಲಿ ಬರೋ ರೋಡ್ ಗಳಲ್ಲಿ ಪಾರ್ಕಿಂಗ್ ಮಾಡೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕ (Parking Fees) ವಿಧಿಸೋ ಪ್ಲಾನ್ ಮಾಡಿಕೊಂಡು ನೂತನ ಪಾರ್ಕಿಂಗ್ ನೀತಿಯನ್ನ ಜಾರಿಗೆ ತಂದಿದೆ. ಮನೆಯ ಮುಂದೆ ಪಾರ್ಕ್ ಮಾಡಿದ್ರು ಫೀಸ್ ಕಟ್ಟಬೇಕು ಅನ್ನೋವಂತಿದೆ ಈ ಹೊಸ ರೂಲ್ಸ್. ಇದನ್ನೂ ಓದಿ: ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108
Advertisement
Advertisement
ಈಗಾಗಲೇ ಟೆಂಡರ್ (Tendor) ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಶುರುವಾಗಲಿದೆ. ಜನ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವೂ ಬದುಕಬೇಕಾ ಬೇಡವಾ..? ಪ್ರತಿಯೊಂದಕ್ಕೂ ಟ್ಯಾಕ್ಸ್ ಟ್ಯಾಕ್ಸ್ (Tax) ಅಂತಾ ಸಂಪಾದನೆಯಲ್ಲ ಟ್ಯಾಕ್ಸ್ ಗೆ ಹೋಗ್ತಿದೆ. ಈಗ ಪಾರ್ಕಿಂಗ್‍ಗೂ ದುಡ್ಡುಕೊಡಿ ಅಂದ್ರೆ ಯಾರ್ ಕೊಡ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಮೊದಲು ರೋಡ್ (Road) ಸರಿ ಮಾಡಿ, ಪಾರ್ಕಿಂಗ್ ಹೆಸರಲ್ಲಿ ಲೂಟಿ ಮಾಡಲು ಪ್ಲಾನ್ ಮಾಡಿಕೊಂಡಿದ್ದೀರಾ..? ನೀವು ಈ ರೂಲ್ಸ್ ಫಾಲೋ ಮಾಡ್ತೀರಾ. ಬಿಬಿಎಂಪಿ ಪಾರ್ಕಿಂಗ್ ಗೆ ಅಂತಾ ಏನಾದರೂ ಪ್ಲಾನ್ ಮಾಡಿದ್ದೀಯಾ..? ಏನೂ ಮಾಡದೇ ಈಗ ಶುಲ್ಕ ಅಂತಾ ಬಂದ್ರೇ ಯಾರ್ ಕಟ್ಟುತ್ತಾರೆ. ಇವತ್ತಿನ ಪೆಟ್ರೋಲ್ರೇ (Petrol) ಟ್ ನಲ್ಲಿ ಗಾಡಿ ಓಡಿಸೋದೆ ಕಷ್ಟವಾಗಿದೆ. ನಿಲ್ಲಿಸೋಕು ದುಡ್ಡು ಅಂದ್ರೆ ಜನ ಕಲ್ಲು ತೆಗೆದುಕೊಂಡು ಹೊಡೆಯುತ್ತಾರೆ ಅಂತಾ ಜನ ಬಿಬಿಎಂಪಿಯ ರೂಲ್ಸ್ ವಿರುದ್ಧ ಕಿಡಿಕಾರಿದ್ದಾರೆ.
ಬಿಬಿಎಂಪಿ ಜಾರಿಗೆ ತಂದಿರೋ ನ್ಯೂಪಾರ್ಕಿಂಗ್ ರೂಲ್ಸ್ ಹಿಂಪಡೆಯಬೇಕು ಅಂತಾ ಈಗಾಗಲೇ ಸಿಎಂಗೆ ವೀಲ್ಸ್ ಅನ್ನೋ ಸಂಸ್ಥೆಯವರು ಮನವಿ ಮಾಡಿದ್ದಾರೆ. ಸರ್ಕಾರ ಏನಾದರೂ ಈ ರೂಲ್ಸ್ ಜಾರಿಗೆ ತಂದ್ರೇ ಜನ ರೊಚ್ಚಿಗೆ ಎದ್ದು ಉಗ್ರ ಹೋರಾಟ ಮಾಡೋದಂತೂ ಪಕ್ಕಾ ಆಗಿದೆ.