ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ʼವಿಕ್ರಾಂತ್ ರೋಣʼ ತೆರೆಯ ಮೇಲೆ ಬರಲು ಸಜ್ಜಾಗಿದ್ದು, ಇದೇ ಡಿ.5ರಂದು ಬೆಳಿಗ್ಗೆ 11:05ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಸಿನಿಮಾ ಬಿಡುಗಡೆ ಕುರಿತು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ. ಚಿತ್ರದ ರಿಲೀಸ್ ದಿನಾಂಕ ಇರುವ ಪೋಸ್ಟರ್ ಅನ್ನು ಹಂಚಿಕೊಂಡಿರುವ ಸುದೀಪ್, ಡಿ.7ರಂದು ಸಿನಿಮಾ ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫ್ಯೂಚರ್ ಗಂಡನಿಗೆ ಈಗಲೇ ಷರತ್ತು ಹಾಕಿದ ಸಾರಾ ಅಲಿ ಖಾನ್
#VikrantRona will report to duty on?
Announcement 7th Dec 11:05 AM@anupsbhandari @JackManjunath @Asli_Jacqueline @Alankar_Pandian @AJANEESHB @nirupbhandari @neethaofficial @shaliniartss @Kichchacreatiin @ZeeStudios_ @TSeries@LahariMusic @The_BigLittle @VikrantRona pic.twitter.com/1gVIw5LIzH
— Kichcha Sudeepa (@KicchaSudeep) December 5, 2021
ಅನೂಪ್ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ಬಜೆಟ್ ಸಿನಿಮಾ ವಿಕ್ರಾಂತ್ ರೋಣ. ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು, ವಿಶ್ವದ ಗಮನ ಸೆಳೆದಿತ್ತು. ಇದನ್ನೂ ಓದಿ: ವಂಚಕನಿಂದಲೇ ಜಾಕ್ವೆಲಿನ್‌ಗೆ ಸಿಕ್ತು 10 ಕೋಟಿ ರೂ. ಬೆಲೆಯ ಗಿಫ್ಟ್
ಕಳೆದ ಆಗಸ್ಟ್ ತಿಂಗಳಲ್ಲಿ ಸಿನಿಮಾ ತೆರೆ ಕಾಣಬೇಕಿತ್ತು. ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.