ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ 24 ಗಂಟೆ ಒಳಗೆ ಪೈರಸಿ ಆಗಿದೆ. ಪೈರಸಿಗೆ ಕಠಿಣ ಶಿಕ್ಷೆಯಿದ್ದರೂ, ಅದನ್ನು ತಡೆಗಟ್ಟಲು ಏನೆಲ್ಲ ಕ್ರಮಗಳನ್ನು ತೆಗೆದುಕೊಂಡರೂ, ಪೈರಸಿ ಮಾತ್ರ ನಿಲ್ಲುತ್ತಿಲ್ಲ. ವಿಕ್ರಾಂತ್ ರೋಣ ಸಿನಿಮಾ ಕೂಡ ಪೈರಸಿ ಆಗಿದ್ದು, ಮುಳಬಾಗಿಲು ಸರ್ಕಾರಿ ವಸತಿ ಶಾಲೆಯಲ್ಲಿ ಈ ಸಿನಿಮಾದ ಪೈರಸಿಯನ್ನು ತೋರಿಸುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವಸತಿ ಶಾಲೆಯಲ್ಲಿದ್ದ ಮಕ್ಕಳು ಪೈರಸಿ ಸಿನಿಮಾ ವೀಕ್ಷಿಸಿದ್ದಾರೆ.
Advertisement
ವಸತಿ ಶಾಲೆಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪೈರಸಿಯನ್ನು ನೋಡುವ ವಿಡಿಯೋವನ್ನು ಚಿತ್ರೀಕರಣ ಮಾಡಿರುವ ವಿದ್ಯಾರ್ಥಿಯೊಬ್ಬ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸುದೀಪ್ ಅಭಿಮಾನಿಗಳು ವಸತಿ ಶಾಲೆಯ ಮೇಲ್ವಿಚಾರಕರಿಗೆ ಕರೆ ಮಾಡಿ, ತರಾಟೆಗೆ ತಗೆದುಕೊಂಡಿದ್ದಾರೆ. ಕೂಡಲೇ ವಿಡಿಯೋ ಮೂಲಕ ಕ್ಷಮೆ ಕೇಳಬೇಕು ಇಲ್ಲವೆ ಕಾನೂನು ಕ್ರಮ ಎದುರಿಸಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!
Advertisement
Advertisement
ವಿಕ್ರಾಂತ್ ರೋಣ ಸಿನಿಮಾ ಪೈರಸಿ ಆಗುವ ವಿಚಾರವನ್ನು ಈ ಮೊದಲೇ ಸುದೀಪ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದು ಪೈರಸಿಯಲ್ಲಿ ನೋಡುವಂತಹ ಸಿನಿಮಾವಲ್ಲ, ಥಿಯೇಟರ್ ಗೆ ಬನ್ನಿ ಎಂದು ಮನವಿ ಮಾಡಿದ್ದರು. ಅಲ್ಲದೇ, ಪೈರಸಿ ಆಗಿದ್ದು ಕಂಡು ಬಂದಲ್ಲಿ ಸಿನಿಮಾ ಟೀಮ್ ಗೆ ತಿಳಿಸಿ ಎಂದು ಹೇಳಿದ್ದರು. ವಸತಿ ಶಾಲೆಯಲ್ಲಿ ಸಿನಿಮಾ ವೀಕ್ಷಣೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕ್ರಮಕ್ಕಾಗಿ ಅಭಿಮಾನಿಗಳು ಆಗ್ರಹಿಸಿದ್ದಾರೆ.