ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆ ಆಗಿರುವ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ‘ ಸಿನಿಮಾದ ಬಾಕ್ಸ್ ಆಫೀಸ್ ರಿಪೋರ್ಟ್ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಒಳ್ಳೆಯ ಓಪನಿಂಗ್ ಪಡೆದಿರುವ ಸಿನಿಮಾವನ್ನು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಅದರಲ್ಲೂ ಹಣ ಗಳಿಕೆಯ ಲೆಕ್ಕಾಚಾರಗಳು ರಾತ್ರಿಯಿಂದಲೇ ಶುರುವಾಗಿದ್ದು, ಬಾಕ್ಸ್ ಆಫೀಸಿನಲ್ಲಿ ಗೆಲುವಿನ ದಾಖಲೆಯನ್ನು ಚಿತ್ರ ಬರೆದಿದೆ.
Advertisement
ಕರ್ನಾಟಕವೊಂದರಲ್ಲೇ 2500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಕಂಡಿದೆ. ಬೆಳಗ್ಗೆ 5 ಗಂಟೆಯಿಂದಲೇ ಕೆಲವು ಕಡೆ ಶೋಗಳು ಆರಂಭವಾಗಿವೆ. ಹಾಗಾಗಿ ಕರ್ನಾಟಕವೊಂದರಲ್ಲೇ ಅಂದಾಜು 20 ಕೋಟಿ ರೂಪಾಯಿ ಹರಿದು ಬಂದಿದೆ ಎನ್ನಲಾಗುತ್ತಿದೆ. ಮೊದಲ ದಿನ ಬಹುತೇಕ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಇದನ್ನೂ ಓದಿ:ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ
Advertisement
Advertisement
ಬಾಲಿವುಡ್ ನಲ್ಲೂ ಈ ಸಿನಿಮಾ ಹಿಂದೆ ಬಿದ್ದಿಲ್ಲ. ಈಗಾಗಲೇ ರಿಲೀಸ್ ಆಗಿರುವ ಹಿಂದಿ ಸಿನಿಮಾಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿ ಚಿತ್ರ ಮುನ್ನುಗ್ಗುತ್ತಿದೆ. ಬಾಲಿವುಡ್ ನಲ್ಲಿ ಸಾವಿರಾರು ಸ್ಕ್ರೀನ್ ಗಳಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಹಾಗಾಗಿ ಅಂದಾಜು 10 ಕೋಟಿ ಹಣ ಹರಿದು ಬಂದಿದೆ ಎನ್ನುವುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಸದ್ಯ ಬಿಡುಗಡೆಯಾಗಿರುವ ಬೇರೆ ಸಿನಿಮಾಗಳಿಗೆ ಹೋಲಿಸಿದರೆ, ವಿಕ್ರಾಂತ್ ರೋಣ ಹೆಚ್ಚು ದುಡ್ಡು ಮಾಡಿದೆ.
Advertisement
ಆಂಧ್ರ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ರಿಲೀಸ ಆಗಿತ್ತು. ಅಲ್ಲಿಯೂ ಕೂಡ ಅಂದಾಜು 8 ಕೋಟಿಗೂ ಅಧಿಕ ಹಣ ಬಂದಿದೆಯಂತೆ. ಈ ಸಿನಿಮಾ ರಂಗದಲ್ಲಿ ಟಿಕೆಟ್ ದರ ಕಡಿಮೆ ಇರುವುದರಿಂದ, ಹಣದ ಗಳಿಕೆ ಕಡಿಮೆಯಾಗಿ ಕಾಣುತ್ತಿದೆ. ಆದರೆ, ಒಂದೊಳ್ಳೆ ಕಲೆಕ್ಷನ್ ಎಂದು ಹೇಳಲಾಗುತ್ತಿದೆ. ತಮಿಳು ಸಿನಿಮಾ ರಂಗದಿಂದಲೂ ಅಂದಾಜು 2 ಕೋಟಿ ಹಣ ಬಂದಿದೆ ಎನ್ನುವ ಲೆಕ್ಕಾಚಾರ ಸಿಗುತ್ತಿದೆ. 27 ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅಷ್ಟೂ ದೇಶಗಳಿಂದ ಮೊದಲ ದಿನದ ಗಳಿಕೆ 2 ಕೋಟಿ ಎಂದು ಹೇಳಲಾಗುತ್ತಿದೆ. ವೀಕೆಂಡ್ ನಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ನಿರೀಕ್ಷೆ ಮಾಡಲಾಗಿದೆ.