ಸತತ ಸೋಲುಗಳನ್ನೇ ಅನುಭವಿಸುತ್ತಾ ಬಂದಿದ್ದ ಕಮಲ್ ಹಾಸನ್, ಅಚ್ಚರಿ ಪಡುವಷ್ಟು ಗೆಲುವು ಸಾಧಿಸಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ವಿಕ್ರಮ್ ಸಿನಿಮಾ ಗಲ್ಲಾಪೆಟ್ಟಿಗೆ ತುಂಬಿಸಿದೆ. ಈವರೆಗೂ ಮುನ್ನೂರು ಕೋಟಿಗೂ ಅಧಿಕ ಲಾಭವನ್ನು ವಿಕ್ರಮ್ ತಂದುಕೊಟ್ಟಿದೆ. ಹಾಗಾಗಿ ಕಮಲ್ ಹಾಸನ್ ಮುಖದಲ್ಲಿ ಮಂದಹಾಸ ಮೂಡಿದೆ. ಅದನ್ನು ಇತರರ ಜೊತೆಗೂ ಕಮಲ್ ಹಾಸನ್ ಹಂಚಿಕೊಂಡಿದ್ದಾರೆ.
ವಿಕ್ರಮ್ ಸಿನಿಮಾ ಗೆದ್ದು, ನೂರಾರು ಕೋಟಿ ತಂದುಕೊಟ್ಟರೆ, ಮೊದಲು ನನ್ನ ಸಾಲಗಳನ್ನು ತೀರಿಸುತ್ತೇನೆ ಎಂದು ಕಮಲ್ ಹಾಸನ್ ನುಡಿದಿದ್ದರು. ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದಾರಂತೆ ಕಮಲ್. ಯಾರೊಂದಿಗೆ ಸಾಲ ಮಾಡಿಕೊಂಡಿದ್ದರೋ, ಅವರ ಸಾಲಗಳನ್ನು ತೀರಿಸುತ್ತಾ ಬಂದಿದ್ದಾರಂತೆ. ಹಾಗಾಗಿ ಕಮಲ್ ಮಾತ್ರವಲ್ಲ, ಸಾಲ ಕೊಟ್ಟವರು ಕೂಡ ಖುಷಿ ಪಡುವಂತಾಗಿದೆ. ಅಲ್ಲಿಗೆ ಈ ಸಿನಿಮಾದಿಂದ ಕಮಲ್ ಸಾಲುಮುಕ್ತರಾಗಲಿದ್ದಾರೆ. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್
ನಿರ್ಮಾಪಕರು ಮತ್ತ ಮುಖ್ಯ ಪಾತ್ರಧಾರಿ ಕಮಲ್ ಹಾಸನ್ ಅವರೇ ಆಗಿರುವುದರಿಂದ ಈ ಸಿನಿಮಾದಿಂದ ಬಂದ ಲಾಭದಲ್ಲಿ ನಿರ್ದೇಶಕರಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ್ದರು. ಅಲ್ಲದೇ, ಸಹ ನಿರ್ದೇಶಕರಿಗೂ ಕೂಡ ಬೈಕ್ ನೀಡಿದ್ದರು. ಇದೀಗ ಸಾಲ ತೀರಿಸಿದ್ದಾರೆ. ಅಲ್ಲಿಗೆ ವಿಕ್ರಮ್ ಸಿನಿಮಾ ಕಮಲ್ ಜೀವನಕ್ಕೆ ಖುಷಿ ಮತ್ತು ಅವರ ವೃತ್ತಿ ಬದುಕಿಗೆ ದೊಡ್ಡದೊಂದು ಬ್ರೇಕ್ ನೀಡಿದೆ.