ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ಹಾಗೂ ಸಿಂಧು ಲೋಕನಾಥ್ ನಟಿಸಿರುವ `ಕಾಣದಂತೆ ಮಾಯವಾದನು’ ಚಿತ್ರ ಇಂದು ಯಶಸ್ವಿಯಾಗಿ ತೆರೆಕಂಡಿದೆ. ಟ್ರೈಲರ್, ಹಾಡುಗಳ ಮೂಲಕ ಎಲ್ಲರ ಮನೆಗೆದ್ದಿದ್ದ ಚಿತ್ರ ಚಿತ್ರಮಂದಿರದಲ್ಲೂ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
‘ಕಾಣದಂತೆ ಮಾಯವಾದನು’ ಒಂದು ಕುತೂಹಲ ಭರಿತ ಸಿನಿಮಾವಾಗಿದ್ದು, ಚಿತ್ರದುದ್ದಕ್ಕೂ ಟ್ವಿಸ್ಟ್ ಅಂಡ್ ಟನ್ಸ್ರ್ಗಳು ಸಖತ್ ಮನರಂಜನೆಯನ್ನು ನೀಡುತ್ತೆ. ರಮ್ಮಿ ಚಿತ್ರದ ನಾಯಕ. ರೌಡಿ ಜಯಣ್ಣನಿಂದ ಕೊಲೆಯಾಗುವ ರಮ್ಮಿ ಮತ್ತೆ ಭೂತವಾಗಿ ಬಂದು ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ಹಾಗೆಯೇ ತನ್ನನ್ನು ಸಾಯಿಸಿದವನ ಮೇಲೆ ಯಾವ ರೀತಿ ರಿವೇಂಜ್ ತೀರಿಸಿಕೊಳ್ಳುತ್ತಾನೆ ಎಂದು ಫ್ಯಾಂಟಸಿ ರೂಪದಲ್ಲಿ ಕಟ್ಟಿಕೊಡಲಾಗಿದೆ.
ವಿಭಿನ್ನ ಕಥಾಹಂದರ ಚಿತ್ರದಲ್ಲಿದ್ದು ಹೊಸ ಅಭಿರುಚಿಯಲ್ಲಿ ಕಟ್ಟಿಕೊಡೋ ಪ್ರಯತ್ನವನ್ನು ಮಾಡಲಾಗಿದೆ. ಅಲ್ಲಲ್ಲಿ ಕೊಂಚ ಲ್ಯಾಗ್ ಅನ್ಸಿದ್ರು ಹಾಸ್ಯ, ಆ್ಯಕ್ಷನ್ ಸೀಕ್ವೆನ್ ಗಳು ಅದನ್ನು ಸರಿದೂಗಿಸಿಕೊಂಡು ಹೋಗಿದೆ. ಧರ್ಮಣ್ಣ ಕಡೂರ್ ತಮ್ಮ ಹಾಸ್ಯದ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಾರೆ. ಇನ್ನು ಕಾಮಿಡಿ, ಆ್ಯಕ್ಷನ್, ಡಾನ್ಸ್ ಎಲ್ಲಾ ಕಡೆಗಳಲ್ಲೂ ವಿಕಾಸ್ ಅಭಿನಯ ಭರವಸೆಯನ್ನು ಮೂಡಿಸಿದ್ದು. ಸಿಂಧು ಲೋಕನಾಥ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಮನರಂಜನೆಯನ್ನು ಚಿತ್ರಮಂದಿರದ ಒಳಗೆ ಹೋದವರಿಗೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.
ಚಿತ್ರ: ಕಾಣದಂತೆ ಮಾಯವಾದನು
ನಿರ್ದೇಶಕ: ರಾಜ್ ಪತ್ತಿಪಾಟಿ
ನಿರ್ಮಾಪಕ: ಚಂದ್ರಶೇಖರ್ ನಾಯ್ಡು
ಸಂಗೀತ: ಗುಮ್ಮಿನೇನಿ ವಿಜಯ್
ಛಾಯಾಗ್ರಹಣ: ಸುಜ್ಞಾನ್
ತಾರಾಂಗಣ: ವಿಕಾಸ್, ಸಿಂಧು ಲೋಕನಾಥ್, ರಾಘವ್ ಉದಯ್, ಭಜರಂಗಿ ಲೋಕಿ, ಇತರರು
ರೇಟಿಂಗ್: 3.5/5