ಮೈಸೂರು: ವರುಣಾದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮಗ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಭುಗಿಲೆದ್ದಿರೋ ಸಿಟ್ಟು ಶಮನವಾಗಿಲ್ಲ. ಪ್ರತೀಕಾರವಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಬಸವರಾಜ್‍ರನ್ನೇ ಸೋಲಿಸಿ ಮರು ಚುನಾವಣೆ ನಡೆಸೋ ಸಲುವಾಗಿ ನೋಟಾ ಚಲಾಯಿಸಬೇಕೆಂಬ ಅಭಿಯಾನ ಶುರುವಾಗಿದೆ. ಇದನ್ನೂ ಓದಿ: ಇದೊಂದು ಧರ್ಮಯುದ್ದ ಇದ್ದಂತೆ, ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ:ಜಿಟಿ ದೇವೇಗೌಡ
ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸುವಾಗ 40 ರಿಂದ 50 ಸಾವಿರ ಜನರಿದ್ದರು. ಆದ್ರೆ ಅನಂತ್‍ಕುಮಾರ್, ಸಂತೋಷ್ ಕಡೆಯ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸುವಾಗ ಕೇವಲ 6 ಜನರಿದ್ದರು. ಇವರಿಬ್ಬರ ಗರ್ವಭಂಗ ಆಗ್ಬೇಕು. ವೀರಶೈವ-ಲಿಂಗಾಯತರ ಸ್ವಾಭಿಮಾನವನ್ನ ನೋಟಾ ಮೂಲಕ ತೋರಿಸಬೇಕಿದ್ದು, ಅವರ ಸ್ವಾಭಿಮಾನಕ್ಕೆ ಪೆಟ್ಟು ಕೊಡ್ಬೇಕಾದ್ರೆ ಬಿಜೆಪಿ ನೂರು ಸಲ ಯೋಚಿಸಬೇಕು. ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸೋದ್ರಿಂದ ಚಾಮರಾಜನಗರ ಮತ್ತು ಮೈಸೂರಿನ 9 ಕ್ಷೇತ್ರಗಳಲ್ಲಿ ಗೆಲುವಿಗೆ ಭಂಗ ಆಗುತ್ತದೆ ಅಂತ ಅನಂತ್‍ಕುಮಾರ್, ಸಂತೋಷ್ ನಿಮಗೆ ಗೊತ್ತಿಲ್ವೆ ಎಂದು ಪ್ರಶ್ನಿಸಿರೋ ಕರಪತ್ರ ವೈರಲ್ ಆಗಿದೆ. ಇದನ್ನೂ ಓದಿ: ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!
Advertisement
Advertisement
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧವೇ 25 ಸಾವಿರಕ್ಕಿಂತ ಹೆಚ್ಚು ನೋಟಾ ವೋಟ್ ಚಲಾಯಿಸುವಂತೆ ಪಕ್ಷದ ಕಾರ್ಯಕರ್ತರೇ ವಾಟ್ಸಾಪ್‍ನಲ್ಲಿ ಪ್ರಚಾರ ಮಾಡ್ತಿದ್ದಾರೆ. ಆದ್ರೆ, ಒಟ್ಟು ಮತಗಳ ಅರ್ಧಕ್ಕಿಂತಲೂ ಹೆಚ್ಚು ನೋಟಾ ಚಲಾಯಿಸಿದ್ರೂ ಮರು ಚುನಾವಣೆ ನಡೆಯಲ್ಲ. ಇದನ್ನೂ ಓದಿ: ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು