– ಬಿ.ಎಲ್.ಸಂತೋಷ್ ಬಣಕ್ಕೆ ಕೊಕ್; ವಿಜಯೇಂದ್ರ ಪಟ್ಟಿಗೆ ಗ್ರೀನ್ ಸಿಗ್ನಲ್
– ವಿ.ಸೋಮಣ್ಣಗೆ ಇಲ್ಲ ಯಾವುದೇ ಸ್ಥಾನ
ಬೆಂಗಳೂರು: ಬಿಜೆಪಿ (BJP) ರಾಜ್ಯ ಘಟಕದ ಪದಾಧಿಕಾರಿಗಳ ತಂಡ ಪುನಾರಚನೆ ಮಾಡಲಾಗಿದೆ. ಹೊಸದಾಗಿ 10 ಮಂದಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯ ಬಿಜೆಪಿ ಪದಾಧಿಕಾರಿಗಳ ಘಟಕ ಪುನಾರಚಿಸಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ಆದೇಶ ಹೊರಡಿಸಿದ್ದಾರೆ.
Advertisement
ಹೊಸದಾಗಿ 10 ಜನ ರಾಜ್ಯ ಉಪಾಧ್ಯಕ್ಷರು, 4 ಮಂದಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಜನ ರಾಜ್ಯ ಕಾರ್ಯದರ್ಶಿಗಳು, ಒಬ್ಬರು ಖಜಾಂಚಿ ನೇಮಕಗೊಂಡಿದ್ದಾರೆ. 7 ಮೋರ್ಚಾಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ಹಾಗಾದ್ರೆ, ಯಾವ ಸ್ಥಾನಕ್ಕೆ ಯಾರ‍್ಯಾರು ಎಂಬ ವಿವರ ಇಲ್ಲಿದೆ. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಸರ್ಕಾರದ ಆದೇಶ 2, 3 ದಿನದಲ್ಲಿ ಹೊರಬೀಳುತ್ತೆ: ಹೆಚ್.ಕೆ. ಪಾಟೀಲ್
Advertisement
Advertisement
ರಾಜ್ಯ ಬಿಜೆಪಿ ಉಪಾಧ್ಯಕ್ಷರು
ಮುರುಗೇಶ್ ನಿರಾಣಿ
ಬೈರತಿ ಬಸವರಾಜು
ರಾಜೂಗೌಡ ನಾಯಕ್
ಎನ್.ಮಹೇಶ್
ಅನಿಲ್ ಬೆನಕೆ
ಹರತಾಳು ಹಾಲಪ್ಪ
ರೂಪಾಲಿ ನಾಯಕ್
ಬಸವರಾಜ ಕೇಲಗಾರ
ಮಾಳವಿಕಾ ಅವಿನಾಶ್
ಎಂ.ರಾಜೇಂದ್ರ
Advertisement
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು
ಸುನೀಲ್ ಕುಮಾರ್
ಪಿ.ರಾಜೀವ್
ನಂದೀಶ್ ರೆಡ್ಡಿ ಪ್ರೀತಂ ಗೌಡ
ರಾಜ್ಯ ಬಿಜೆಪಿ ಕಾರ್ಯದರ್ಶಿಗಳು
ಶೈಲೇಂದ್ರ ಬೆಲ್ದಾಳೆ
ಡಿ.ಎಸ್.ಅರುಣ್
ಬಸವರಾಜ ಮತ್ತಿಮಾಡ್
ಸಿ.ಮುನಿರಾಜು
ವಿನಯ್ ಬಿದರೆ
ಕ್ಯಾಪ್ಟನ್ ಬ್ರಿಜೇಶ್ ಚೌಟ
ಶರಣು ತಳ್ಳಿಕೇರಿ
ಲಲಿತಾ ಅನಾಪುರ
ಲಕ್ಷ್ಮಿ ಅನಾಪುರ
ಅಂಬಿಕಾ ಹುಲಿನಾಯ್ಕರ್
ರಾಜ್ಯ ಬಿಜೆಪಿ ಖಜಾಂಚಿ
ಸುಬ್ಬ ನರಸಿಂಹ
ಮೋರ್ಚಾಗಳಿಗೆ ಅಧ್ಯಕ್ಷರ ನೇಮಕ
ಮಹಿಳಾ ಮೋರ್ಚಾ – ಸಿ ಮಂಜುಳಾ
ಎಸ್‌ಸಿ ಮೋರ್ಚಾ – ಶಾಸಕ ಸಿಮೆಂಟ್ ಮಂಜು
ಹಿಂದುಳಿದ ವರ್ಗಗಳ ಮೋರ್ಚಾ – ರಘು ಕೌಟಿಲ್ಯ
ರೈತ ಮೋರ್ಚಾ – ಎ.ಎಸ್.ಪಾಟೀಲ್ ನಡಹಳ್ಳಿ
ಎಸ್‌ಟಿ ಮೋರ್ಚಾ – ಬಂಗಾರು ಹನುಮಂತು
ಯುವ ಮೋರ್ಚಾ – ಶಾಸಕ ಧೀರಜ್ ಮುನಿರಾಜು
ಅಲ್ಪಸಂಖ್ಯಾತರ ಮೋರ್ಚಾ – ಅನಿಲ್ ಥಾಮಸ್
ಪದಾಧಿಕಾರಿಗಳ ಪಟ್ಟಿಯಲ್ಲಿ ಬಿ.ಎಲ್.ಸಂತೋಷ್ ಬಣಕ್ಕೆ ಹೈಕಮಾಂಡ್ ಗೇಟ್‌ಪಾಸ್ ಕೊಟ್ಟಿದೆ. ಬಹುತೇಕ ವಿಜಯೇಂದ್ರ ತೆಗೆದುಕೊಂಡು ಹೋಗಿದ್ದ ಪದಾಧಿಕಾರಿಗಳ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಪುತ್ರ ಅರುಣ್ ಸೋಮಣ್ಣಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಸೋಮಣ್ಣ ಮಾಡಿಕೊಂಡಿದ್ದ ಮನವಿಗೆ ಹೈಕಮಾಂಡ್ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಅರುಣ್ ಸೋಮಣ್ಣ ಸದ್ಯ ತುಮಕೂರು ಜಿಲ್ಲಾ ಉಪಾಧ್ಯಕ್ಷ ಆಗಿದ್ದಾರೆ. ಜಿಲ್ಲಾ ಬಿಜೆಪಿ ಘಟಕಗಳ ಪುನಾರಚನೆ ವೇಳೆ ಅರುಣ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಕುಮಾರಸ್ವಾಮಿ ಪಕ್ಷ ಉಳಿಸಿಕೊಳ್ಳಲು ಹೇಳಿಕೆ ನೀಡುತ್ತಿದ್ದಾರೆ ಡಿ.ಕೆ.ಸುರೇಶ್