ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಜೀವನವನ್ನು ಬಹಳ ಸೊಗಸಾಗಿ ನಡೆಸುತ್ತಿದ್ದಾರೆ. ತಮ್ಮ ಸಿನಿಮಾ ಶೂಟಿಂಗ್ ಮಧ್ಯೆ ಫ್ಯಾಮಿಲಿಗೂ ಅಷ್ಟೇ ಸಮಯ ಕೊಡುವ ಅವರು, ಇತ್ತೀಚೆಗಷ್ಟೇ ಕುಟುಂಬದೊಂದಿಗೆ ಖಾಸಗಿ ಜೆಟ್ನಲ್ಲಿ ಪ್ರಯಾಣಿಸುವ ಮೂಲಕ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ವಿಜಯ್ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫ್ಯಾಮಿಲಿ ಜೊತೆ ವಿಜಯ್ ಸಖತ್ ಎಂಜಾಯ್ ಮಾಡಿದ್ದಾರೆ.
Advertisement
ಹೌದು, ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಅವರ ಸಹೋದರ ಆನಂದ್ ದೇವರಕೊಂಡ ವೀಡಿಯೋವನ್ನು ಸೆರೆಹಿಡಿದಿದ್ದಾರೆ. ವೀಡಿಯೋದಲ್ಲಿ ವಿಜಯ್ ಅವರ ತಾಯಿ, ಫ್ಲೈಟ್ ಟೆಕ್ ಆಗುವ ವೇಳೆ ಭಯಭೀತರಾಗುತ್ತಾರೆ. ಆಗ ಆನಂದ್ ದೇವರಕೊಂಡ, ಏನು ಆಗುವುದಿಲ್ಲ ಎಂದು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿರುತ್ತಾರೆ. ಅಲ್ಲದೇ ವಿಜಯ್ ತಂದೆ ಕೂಡ ಪತ್ನಿಯ ಕೈ ಹಿಡಿದುಕೊಳ್ಳುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್
Advertisement
Advertisement
ನಂತರ ವಿಜಯ್ ತಂದೆ ನ್ಯೂಸ್ ಪೇಪರ್ ಓದುತ್ತಿರುವುದನ್ನು, ವಿಜಯ್ ಮೊಬೈಲ್ ವೀಕ್ಷಿಸುತ್ತಿರುವುದನು ವೀಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ವಿಜಯ್ ಕುಟುಂಬ ವಿಮಾನದಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನೂ ಕ್ಯಾಪ್ಷನ್ನಲ್ಲಿ ವಿಜಯ್ ದೇವರಕೊಂಡ ಟ್ರವೆಲ್ ಡೈರಿ ಆಫ್ ದೇವರಕೊಂಡ. ಶೂಟ್ ಹಾಗೂ ಎಡಿಟ್ ಮಾಡಿರುವುದು ನನ್ನ ಪುಟ್ಟ ಸಹೋದರ ಆನಂದ್ ದೇವರಕೊಂಡ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್
Advertisement
View this post on Instagram
ಸದ್ಯ ವಿಜಯ್ ದೇವರಕೊಂಡ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೆಳುತ್ತಿರುವ ಲೈಗರ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಈ ಸಿನಿಮಾದಲ್ಲಿ ವಿಜಯ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಲೈಗರ್ ಸಿನಿಮಾದಲ್ಲಿ ಗಾಡ್ ಆಫ್ ದಿ ಬಾಕ್ಸಿಂಗ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಮೈಕ್ ಟೈಸನ್ ಅಭಿನಯಿಸಲಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡಿತ್ತು.