ವಿಜಯಪುರ: ಜಿಲ್ಲೆಯಲ್ಲಿ ಇತ್ತೀಚಿಗಷ್ಟೇ ಹಲ್ಲೆ ನಡೆಸಿದ್ದ ಖತರ್ನಾಕ್ ಮುಸುಧಾರಿಗಳ ಗ್ಯಾಂಗ್‌ನ್ನು ವಿಜಯಪುರದ (Vijayapura) ಗಾಂಧಿ ಚೌಕ ಪೊಲೀಸರು ಬಂಧಿಸಿದ್ದಾರೆ.
ಬಂಧಿಸಿದ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಜತ್‌ನ ಪಾರ್ದಿ ಗ್ಯಾಂಗ್‌ನ ವಿಠ್ಠಲ ಚೌಹಾಣ, ಸುರೇಶ್ ಚೌಹಾಣ, ಆಕಾಶ್ ರಾವತ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕುರಿತ ದೇವೇಗೌಡರ ಹೇಳಿಕೆ ಸರಿಯಾಗಿದೆ: ಛಲವಾದಿ ನಾರಾಯಣಸ್ವಾಮಿ
ವಿಜಯಪುರ ನಗರದ ಜೈನಾಪೂರ ಲೇಔಟ್, ರಾಜಕುಮಾರ್ ಲೇಔಟ್ ಸೇರಿದಂತೆ ನಗರದಲ್ಲಿ ಕೆಲವು ದಿನಗಳಿಂದ ಮುಸುಕುಧಾರಿಗಳ ಹಾವಳಿ ಹೆಚ್ಚಾಗಿತ್ತು. ಇತ್ತೀಚಿಗಷ್ಟೇ ಜೈನಾಪೂರ ಲೇಔಟ್‌ನಲ್ಲಿ ಮನೆ ದರೋಡೆ ಮಾಡಿ, ಐವರು ಮುಸುಕುಧಾರಿಗಳು ಸಂತೋಷ ಎಂಬುವವರಿಗೆ ಚಾಕು ಇರಿದು ಮೊದಲ ಮಹಡಿಯಿಂದ ಕೆಳಗೆ ಬಿಸಾಕಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಸಂತೋಷ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿ, ಐವರ ಪೈಕಿ ಮೂವರನ್ನ ವಶಕ್ಕೆ ಪಡೆದಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ವಿಜಯೇಂದ್ರ