– ಲಾಕ್‍ಡೌನ್ ಉಲ್ಲಂಘಿಸಿದವರಿಗೆ ವಿನೂತನ ಶಿಕ್ಷೆ
ವಿಜಯಪುರ: ಇಡೀ ಭಾರತ ದೇಶವೇ ಕೊರೊನಾ ಭೀತಿ ಹಿನ್ನೆಲೆಯಲ್ಲಿ ನೀಡಿದ ಲಾಕ್‍ಡೌನ್‍ಗೆ ಬೆಂಬಲ ನೀಡಿ ಮನೆಯಲ್ಲಿ ಜನರು ಲಾಕ್ ಆಗಿದ್ದಾರೆ. ಆದರೆ ಕೆಲವರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಗುತ್ತಿದ್ದಾರೆ. ಇದೇ ರೀತಿ ಕೊರೊನಾ ಎಮರ್ಜೆನ್ಸಿ ಧಿಕ್ಕರಿಸಿದವರಿಗೆ ವಿಜಯಪುರದ ಗಾಂಧಿ ಚೌಕ್ ಪೊಲೀಸರು ವಿಶಿಷ್ಟ ಪಾಠ ಕಲಿಸಿದ್ದಾರೆ.
ಲಾಕ್‍ಡೌನ್ ಉಲ್ಲಂಘಿಸಿ ಸುಖಾಸುಮ್ಮನೆ ರಸ್ತೆ ಮೇಲೆ ತಿರುಗಾಡುವವರಿಗೆ ಪೊಲೀಸರು ಹಣೆಗೆ ವಿಭೂತಿ ಹಚ್ಚಿ, ಊದಿನ ಕಡ್ಡಿಯಿಂದ ಪೂಜೆ ಮಾಡುತ್ತಿದ್ದಾರೆ. ಗಾಂಧಿಚೌಕ ಪೊಲೀಸ್ ಠಾಣಾ ಸಿಪಿಐ ರವೀಂದ್ರ ನಾಯ್ಕೊಡಿ ಹಾಗೂ ಸಂಚಾರಿ ಪಿಎಸ್.ಐ ಆರೀಫ್ ಮುಶ್ರಪುರಿ ನೇತೃತ್ವದಲ್ಲಿ ಪೂಜೆ ಕಾರ್ಯ ನಡೆಯುತ್ತಿದೆ.
Advertisement
Advertisement
ನಗರದ ಗೋದಾವರಿ, ಗಾಂಧಿಚೌಕ್ ಬಳಿ ಸೇರಿದಂತೆ ಹಲವೆಡೆ ಈ ಕಾರ್ಯ ನಡೆಯುತ್ತಿದೆ. ಅಲ್ಲದೆ ಲಾಠಿ ಬೀಸಿದರು ಜನರು ಬಗ್ಗದ ಕಾರಣ ಈ ವಿನೂತನ ಶಿಕ್ಷೆಗೆ ಪೊಲೀಸ್ರು ಮುಂದಾಗಿದ್ದಾರೆ.
Advertisement
ಪೂಜೆ ನಂತರ ಮುಂದಿನ ಬಾರಿ ಲಾಕ್‍ಡೌನ್ ಉಲ್ಲಂಘಿಸಿದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ವಿಜಯಪುರ ಪೊಲೀಸರ ವಿನೂತ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.