ವಿಜಯಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ವಿಜಯಪುರ ಮಹಾನಗರ ಪಾಲಿಕೆ (Vijayapura City Corporation) ಚುನಾವಣೆಯಲ್ಲಿ ಬಿಜೆಪಿಯ (BJP) ಅತಿ ಹೆಚ್ಚು 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
Advertisement
ನಗರಪಾಲಿಕೆಯ (Vijayapura City Corporation) 35 ವಾರ್ಡ್‌ಗಳ ಪೈಕಿ ಕಾಂಗ್ರೆಸ್ (Congress) 10, ಪಕ್ಷೇತರ 5, ಎಐಎಂಐಎಂ (AIMIM) 2, ಜೆಡಿಎಸ್ (JDS) 1 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಬಹುಮತಕ್ಕೆ 1 ಸ್ಥಾನ ಕೊರತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ (BJP) ಪಕ್ಷೇತರರ ಜೊತೆ ಅಧಿಕಾರಕ್ಕೆ ಏರುವ ಸಾಧ್ಯತೆಯಿದೆ. ಇದನ್ನೂ ಓದಿ: ಶಾಸಕ ಶಿವನಗೌಡ ನಾಯಕ್‍ರಿಂದ ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆ: ಎಸ್‍ಪಿಗೆ ದೂರು
Advertisement
Advertisement
ವಿಜಯಪುರದ (Vijayapura) ಒಟ್ಟು 35 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ (Elections) ವಾರ್ಡ್ ಸಂಖ್ಯೆ 3, 5, 6, 7, 9, 10, 11, 12, 13, 14, 15, 21, 22, 26, 29, 32, 35 ಸೇರಿ ಒಟ್ಟು 17 ವಾರ್ಡ್‌ಗಳಲ್ಲಿ ಬಿಜೆಪಿ (BJP) ಭರ್ಜರಿ ಜಯ ಸಾಧಿಸಿದೆ. ಇನ್ನೂ 1, 16, 18, 20, 23, 27, 30, 31, 33, 34 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದು, 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 2, 8, 17, 19, 24 ವಾರ್ಡ್‌ಗಳಲ್ಲಿ ಪಕ್ಷೇತರ, ವಾರ್ಡ್ 4ರಲ್ಲಿ ಜೆಡಿಎಸ್ (JDS) ಹಾಗೂ ವಾರ್ಡ್ 28, 25ರಲ್ಲಿ ಐಎಂಐಎಂ ಪಕ್ಷದ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಹುದ್ದೆಗೆ 70-80 ಲಕ್ಷ ಹಣ – ಹೇಳಿಕೆ ನನ್ನದಲ್ಲವೆಂದು ಉಲ್ಟಾ ಹೊಡೆದ MTB
Advertisement
ಸೋಮವಾರ ಬೆಳಿಗ್ಗೆ 8 ಗಂಟೆಗೆ ನಗರ ಪ್ರೌಢಶಾಲೆ ಆವರಣದಲ್ಲಿ ಆರಂಭವಾದ ಮತ ಎಣಿಕೆ ಕಾರ್ಯ ಮಧ್ಯಾಹ್ನ 3.30ರ ವೇಳೆಗೆ ಮುಕ್ತಾಯಗೊಂಡಿತು. 7 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಮತ ಎಣಿಕೆ ಕಾರ್ಯಕ್ಕೆ 179 ಸಿಬ್ಬಂದಿಯನ್ನ ನೇಮಕ ಮಾಡಲಾಗಿತ್ತು. 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 7 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 7 ಕಂಪ್ಯೂಟರ್ ಆಪರೇಟರ್ಸ್ ಹಾಗೂ ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸಲು 60 ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿತ್ತು. ಚುನಾವಣಾಧಿಕಾರಿಯಾಗಿ ಡಾ.ವಿಜಯಮಹಾಂತೇಶ ದಾನಮ್ಮ ಕಾರ್ಯ ನಿರ್ವಹಿಸಿದರು.
ಬಿಗಿ ಪೊಲೀಸ್ (Police) ಬಂದೋಬಸ್ತ್: ಪಾಲಿಕೆ ಚುನಾವಣೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 3 ಡಿವೈಎಸ್‌ಪಿ, 8 ಸಿಪಿಐ, 32 ಪಿಎಸ್‌ಐ, 35 ಎಎಸ್‌ಐ, 76 ಮುಖ್ಯ ಪೊಲೀಸ್ ಪೇದೆ, 128 ಪೊಲೀಸ್ ಪೇದೆ, 17 ಮಹಿಳಾ ಪೇದೆ, 4 ಐಆರ್‌ಬಿ ಹಾಗೂ 6 ಡಿಎಆರ್ ತುಕಡಿಗಳನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.