– ಜಿ.ಟಿ.ದೇವೇಗೌಡರು ಒಬ್ಬ ನಿಜವಾದ ಒಳ್ಳೆಯ ರಾಜಕಾರಿಣಿ
– ನಾನು ಕಾಂಗ್ರೆಸ್‍ನ ಸ್ಕೋರ್, ಕಾಮೆಂಟ್ರಿ ಹೇಳುವುದಿಲ್ಲ
ವಿಜಯಪುರ: ಮುಖ್ಯಮಂತ್ರಿಗಳು ಒಳ್ಳೆ ಕೆಲಸಕ್ಕೆ ಹೋಗಿದ್ದಾರೆ, ಹೋಗಲಿ ಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ವಿದೇಶ ಪ್ರವಾಸವನ್ನು ಕೊಂಡಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕರು, ಸಿಎಂ ದೊಡ್ಡ ದೇವಸ್ಥಾನವಾದ ಆದಿಚುಂಚನಗಿರಿ ಸ್ವಾಮೀಜಿ ಕನಸು ನನಸು ಮಾಡಲು ಹೋಗಿದ್ದಾರೆ. ಕಾಲಭೈರವೇಶ್ವರನ ಭೂಮಿ ಪೂಜೆಗೆ ಹೋಗಿದ್ದಾರೆ. ಕಾಲಭೈರವೇಶ್ವರ ಅವರಿಗೂ, ನಮಗೂ ಒಳ್ಳೆಯದು ಮಾಡಲಿ ಎಂದು ಹೇಳಿದರು.
Advertisement
Advertisement
ಸಿಎಂ ದ್ವೇಷದ ರಾಜಕಾರಣ ಬಿಟ್ಟು, ಅಭಿವೃದ್ಧಿ ಕೆಲಸ ಮಾಡಲಿ. ಮುಖ್ಯಮಂತ್ರಿಗಳ ಫೇಸ್‍ಬುಕ್‍ನಲ್ಲಿ ಅವರ ಕಾರ್ಯಕರ್ತರು ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದಾರೆ. ಆ ಭಾಷೆಯಿಂದ ಹೊರಬಂದು ಟೀಕೆ ಟಿಪ್ಪಣೆ ಮಾಡಬೇಕು. ನಾವು ಟೀಕೆ ಮಾಡುತ್ತೇವೆ, ಅವರೂ ಮಾಡಲಿ. ಆದರೆ ಅದು ಗೌರವಯುತವಾಗಿರಬೇಕು. ನೇರವಾಗಿ ಬಿಜೆಪಿ ಫೇಸ್‍ಬುಕ್ ಅಭಿಮಾನಿಗಳ ಮೇಲೆ ಕೇಸ್ ದಾಖಲಿಸುವುದು ಸರಿಯಲ್ಲ ಎಂದು ತಿಳಿಸಿದರು.
Advertisement
ಸಚಿವ ಜಿ.ಟಿ.ದೇವೇಗೌಡ ಅವರು ಒಬ್ಬ ನಿಜವಾದ ಒಳ್ಳೆಯ ರಾಜಕಾರಿಣಿ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಗೌರವವಿದೆ. ಹಾಗಾಗಿ ನಾನು ಅವರಿಗೆ ಕೃತಜ್ಞತೆ ಹೇಳುತ್ತೇನೆ. ಇಂತಹ ರಾಜಕಾರಣಿಗಳು ಕರ್ನಾಟಕಕ್ಕೆ ಬೇಕು. ಕಾಂಗ್ರೆಸ್ ನಾಯಕರಲ್ಲಿ ಕೆಲವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅವರು ಕನಸು ಕಾಣುವುದು ಬೇಡ. ಕರ್ನಾಟಕದಲ್ಲಿ ಇನ್ನೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಮಧ್ಯಂತರ ಅಥವಾ ನಾಲ್ಕು ವರ್ಷ ಬಿಟ್ಟು ಚುನಾವಣೆ ಬಂದರೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.
Advertisement
ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಕಾಂಗ್ರೆಸ್‍ನ ಆಂತರಿಕ ಜಗಳದಿಂದ ರಾಜೀನಾಮೆ ನೀಡಿದ್ದಾರೆ. ಇನ್ನೂ ಎಷ್ಟು ವಿಕೆಟ್ ಅಥವಾ ಏನು ಬೀಳುತ್ತವೆ ಅಂತ ಗೊತ್ತಿಲ್ಲ. ನಾನು ಕಾಂಗ್ರೆಸ್‍ನ ಸ್ಕೋರ್ ಹಾಗೂ ಕಾಮೆಂಟ್ರಿ ಹೇಳುವುದಿಲ್ಲ. ಮೈತ್ರಿ ಸರ್ಕಾರದ ಬೆಳವಣಿಗೆ ಬಗ್ಗೆ ಮಾತನಾಡಬೇಡಿ ಅಂತ ಹೈಕಮಾಂಡ ಸೂಚನೆ ನೀಡಿದೆ ಎಂದು ಹೇಳಿದರು.