ಬಾಗಲಕೋಟೆ: ಹುನಗುಂದ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೆಸರು ಎರಡು ಮತದಾರರ ಪಟ್ಟಿಯಲ್ಲಿರುವ ವಿಷಯ ಬೆಳಕಿಗೆ ಬಂದಿದೆ.
ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್ ದಾಖಲೆ ಸಮೇತ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್, ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ತಮ್ಮ ಹುಟ್ಟೂರು ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಪತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರಲ್ಲದೇ, ಇಳಕಲ್ ನಗರದ ವಾರ್ಡ್ ನಂಬರ್ 1ರ ಮತದಾರರ ಪಟ್ಟಿಯಲ್ಲಿಯೂ ಹೆಸರನ್ನು ಹೊಂದಿದ್ದಾರೆ. ಈ ಮೂಲಕ ಕಾನೂನಿಗೆ ಮಣ್ಣೆರಚಿದ್ದಾರೆ ಎಂದು ಆರೋಪ ಮಾಡಿದ್ದಾರೆ.
Advertisement
Advertisement
ಇಳಕಲ್ ನಗರದ ಬೂತ್ ನಂಬರ್ 151ರಲ್ಲಿ ಬೇರೆ ಬೇರೆ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದಲ್ಲಿರುವ 29 ಜನರನ್ನು ಸೇರಿಸಲಾಗಿದೆ. ಅಲ್ಲದೇ ಅದೇ ಬೂತ್ ನಲ್ಲಿ 16 ಜನ ಸತ್ತವರ ಹೆಸರನ್ನು ಸೇರ್ಪಡೆ ಮಾಡಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಕ್ಷೇತ್ರದಾದ್ಯಂತ ಶಾಸಕ ಕಾಶಪ್ಪನವರ್ ತಮ್ಮ ಪ್ರಭಾವ ಬಳಸಿ ಹುನಗುಂದ ಮತಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ನಕಲಿ ಮತದಾರರನ್ನು ಸೃಷ್ಟಿ ಮಾಡಿದ್ದಾರೆ ಎಂದು ದೊಡ್ಡನಗೌಡ ಪಾಟಿಲ್ ಆರೋಪಿಸಿದ್ದಾರೆ.
Advertisement
Advertisement
ಇದಕ್ಕೆ ಹುನಗುಂದ ತಹಶೀಲ್ದಾರ ಸುಭಾಸ್ ಸಂಪಗಾವಿ, ಇಳಕಲ್ ನಗರಸಭೆ ಆಯುಕ್ತ ಪಾತ್ರವಹಿಸಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ, ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರಿನ ಮನವಿ ನೀಡಿದ್ದಾರೆ.