– ಪ್ರತಿ ಜಿಲ್ಲೆಗೆ ಒಂದೊಂದು ಗೋ ಶಾಲೆ ಪ್ರಾರಂಭ
ವಿಜಯನಗರ: ರಾಜ್ಯ ಸರ್ಕಾರ ನಾಡಿನ ಜನರ ಒತ್ತಾಸೆಗೆ ಸ್ಪಂದಿಸಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯಿಂದ ಪ್ರಾಣಿ ಸಂಗ್ರಹಾಲಯದಲ್ಲಿ ಆಹಾರದ ಕೊರತೆಯಾಗಿಲ್ಲ ಎಂದು ಸಚುವ ಪ್ರಭು ಚವ್ಹಾಣ್ ಹೇಳಿದ್ದಾರೆ.
Advertisement
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅಧಿಕಾರಿಗಳು ಸಭೆ ನಡೆಸಿ ಮಾತನಾಡಿದ ಅವರು, ಪಶುಸಂಗೋಪನಾ ಇಲಾಖೆಯಲ್ಲಿ ಜಾರಿಯಲ್ಲಿರುವ ವಿವಿಧ ಸೇವಾ ಸೌಲಭ್ಯಗಳ ಕುರಿತು ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಗ್ರಾಮಸಭೆಗಳ ಮೂಲಕ ರೈತರಿಗೆ ಅರಿವು ಮೂಡಿಸುವಂತೆ ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಇದನ್ನೂ ಓದಿ: ಪಾಲಿಕೆಯಲ್ಲಿ ಸ್ವಂತ ಶಕ್ತಿಯಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ: ಹೆಚ್.ಡಿ.ಕುಮಾರಸ್ವಾಮಿ
Advertisement
Advertisement
ಮಾಜಿ ಸಿಎಂ ಯಡಿಯೂರಪ್ಪ ಅವರು ನನಗೆ ಈ ಖಾತೆ ಜವಾಬ್ದಾರಿ ಕೊಟ್ಟಿದ್ದರು. ಗೋವುಗಳ ರಕ್ಷಣೆ ಆಗಬೇಕು, ಗೋಹತ್ಯೆ ಕಾನೂನು ಜಾರಿ ಆಗಬೇಕು ಎನ್ನುವ ಡಿಮ್ಯಾಂಡ್ ಇತ್ತು. ಹೀಗಾಗಿ ನಾನು ಯುಪಿ, ಗುಜರಾತ್ ಹೋಗಿ ಅಧ್ಯಯನ ಮಾಡಿ ಬಂದು ಗೋವುಗಳು ಕಸಾಯಿ ಖಾನೆಗೆ ಹೋಗಬಾರದು ಅಂತ ಈ ಕಾಯ್ದೆ ಜಾರಿ ಮಾಡಲಾಗಿದೆ ಎಂದಿದ್ದಾರೆ.
Advertisement
ಗೋಹತ್ಯೆ ಕಾಯ್ದೆ ಜಾರಿಯಾದ ಬಳಿಕ 7ಸಾವಿರ ಗೋವುಗಳ ರಕ್ಷಣೆ ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ಒಂದೊಂದು ಗೋ ಶಾಲೆ ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ. ಪ್ರತಿ ಜಿಲ್ಲೆಗೆ 50 ಲಕ್ಷ ಮಂಜೂರು ಮಾಡಿ ಅಂತ ಸಿಎಂ ಬಳಿ ಮನವಿ ಮಾಡಿದ್ದೆವೆ. ಪ್ರಾಣಿ ಸಹಾಯವಾಣಿ ಕೇಂದ್ರ, ದೇಶದಲ್ಲಿ ಮೊದಲ ಬಾರಿಗೆ ನಾವು ಪ್ರಾರಂಭ ಮಾಡಿದ್ದೇವೆ ಪ್ರಾಣಿಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ ನಂತರ ಝೂಗಳಲ್ಲಿ ಪ್ರಾಣಿಗಳಿಗೆ ಆಹಾರ ಸಮಸ್ಯೆಯಾಗಿಲ್ಲ, ಆ ರೀತಿಯ ದೂರುಗಳು ಬಂದಿಲ್ಲ. ಒಂದು ವೇಳೆ ಹಾಗೆ ದೂರು ಬಂದರೆ ಅದನ್ನು ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ.