ಬಳ್ಳಾರಿ: ವಿಜಯನಗರ ಜಿಲ್ಲಾ ಪೊಲೀಸರ (Vijayanagara Police) ನಿರಂತರ ಕಾರ್ಯಾಚರಣೆಯಲ್ಲಿ ಕಳೆದ 1 ವರ್ಷದಿಂದ ಕಳ್ಳತನವಾಗಿದ್ದ ಕೋಟ್ಯಂತರ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದ ಪೊಲೀಸರು ಅದನ್ನು ವಾರಸುದಾರರಿಗೆ (Property Owners) ಹಿಂದಿರುಗಿಸಿದ್ದಾರೆ.
ಕಳೆದ 1 ವರ್ಷದಲ್ಲಿ 244 ಪ್ರಕರಣಗಳಲ್ಲಿ 2 ಕೋಟಿ 15 ಲಕ್ಷ 53 ಸಾವಿರದ 637 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಕಳುವಾಗಿದ್ದ KKRTC ಬಸ್, ಬಂಗಾರ, ಬೆಳ್ಳಿ, ಹಸು, ಕರು, ದನ ಸೇರಿದಂತೆ ಇತರೆ ಸ್ವತ್ತುಗಳು ಪೊಲೀಸರು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಪ್ರಕರಣ: ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತೆ- ಶಿವಣ್ಣ ಫಸ್ಟ್ ರಿಯಾಕ್ಷನ್
Advertisement
Advertisement
ಒಂದು ವರ್ಷದ ಅವಧಿಗೆ ದಾಖಲಾದ ಸ್ವತ್ತಿನ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಕೋಟಿ 54 ಲಕ್ಷದ 89,001 ಸಾವಿರ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು. ಆ ಪೈಕಿ 2,15,53,637 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಈ ಪೈಕಿ 85,83,637 ರೂ. ಮೌಲ್ಯದ 96 ದ್ವಿ-ಚಕ್ರವಾಹನಗಳು, 42,31,200 ರೂ. ಮೌಲ್ಯದ 18 ತೋಲ ಬಂಗಾರದ, 95,300 ರೂ. ಮೌಲ್ಯದ 30 ತೋಲ ಬೆಳ್ಳಿ ಆಭರಣಗಳು ಹಾಗೂ 2,05,000 ರೂ. ಮೌಲ್ಯದ 25 ಮೊಬೈಲ್ ಗಳನ್ನ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇದನ್ನೂ ಓದಿ: T20 World Cup 2024: ಪತ್ನಿಗೆ ವೀಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ- ಫೋಟೋ ವೈರಲ್