ದರ್ಶನ್‌ಗಾಗಿ ಬಟ್ಟೆ, ಡ್ರೈಪ್ರೂಟ್ಸ್ ತಂದ ವಿಜಯಲಕ್ಷ್ಮಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ದರ್ಶನ್‌ಗೆ ಅಭಯ

Public TV
2 Min Read
Vijayalakshmi 4

ಬಳ್ಳಾರಿ: ಕೊಲೆ ಆರೋಪಿ ದರ್ಶನ್‌ನನ್ನ ನೋಡಲು ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಭೇಟಿ ನೀಡಿರುವ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು, ದರ್ಶನ್‌ಗಾಗಿ ಸುಮಾರು ಮೂರು ಬ್ಯಾಗ್‌ಗಳಲ್ಲಿ ಬಟ್ಟೆ ಹಾಗೂ ಆರೋಗ್ಯಕರ ತಿಂಡಿಗಳನ್ನು ತಂದಿದ್ದಾರೆ ಎಂದು ತಿಳಿದುಬಂದಿದೆ.

ಮೂರು ಬ್ಯಾಗ್‌ಗಳ ಸಮೇತ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದ ವಿಜಯಲಕ್ಷ್ಮಿ ದರ್ಶನ್‌ಗೆ ಕೊಡಲು ಟೀ ಶರ್ಟ್ ಸೇರಿದಂತೆ ಇತರ ಬಟ್ಟೆಗಳು, ಬಿಸ್ಕೆಟ್‌ ಹಾಗೂ ಡ್ರೈ ಫ್ರೂಟ್ಸ್‌ಗಳನ್ನೂ ತೆಗೆದುಕೊಂಡು ಬಂದಿದ್ದಾರೆ. ಪೊಲೀಸರು ಬ್ಯಾಗ್‌ ಪರಿಶೀಲಿಸಿದ ಬಳಿಕವೇ ಅವುಗಳನ್ನು ಜೈಲಿನ ಒಳಗೆ ಕೊಂಡೊಯ್ಯಲು ಅನುಮತಿಸಿದ್ದಾರೆ. ಇದನ್ನೂ ಓದಿ: ಸಿನಿಮಾಗೆ ಬರೋಲ್ಲ, ನೋಡಲ್ಲ ಅನ್ನೋವಾಗ್ಲೆ ಗತ್ತು ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ: ದರ್ಶನ್‌ ಫ್ಯಾನ್ಸ್‌ಗೆ ಕಿಚ್ಚನ ಖಡಕ್‌ ರಿಪ್ಲೈ

Vijayalakshmi 2

2 ದಿನದಲ್ಲೇ 4 ಕೆಜಿ ತೂಕ ಕಳೆದುಕೊಂಡ ದರ್ಶನ್‌:
ಬಳ್ಳಾರಿ ಜೈಲಿಗೆ ಶಿಫ್ಟ್‌ ಆದ ಎರಡೇ ದಿನಗಳಲ್ಲಿ ದರ್ಶನ್‌ 4 ಕೆಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಾಗ 107 ಕೆಜಿ ಇದ್ದ ದರ್ಶನ್‌, ಇದೀಗ 4 ಕೆಜಿ ತೂಕ ಕಳೆದುಕೊಂಡು 103 ಕೆಜಿ ತೂಕ ಹೊಂದಿದ್ದಾರೆ. ಒಂಟಿತನದಿಂದ ಚಿಂತಿತರಾಗಿರುವ ದರ್ಶನ್‌ ತೂಕ ಕಳೆದುಕೊಂಡಿದ್ದಾರೆ. ಜೈಲಿಗೆ ಬಂದ ಮೊದಲ ದಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ಮಾಡಿರಲಿಲ್ಲ, ಹೀಗಾಗಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಮೇಲೆ ತೂಕ ಕಳೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿಬಂದಿದೆ. ಇದನ್ನೂ ಓದಿ: Bengaluru | ಪವಿತ್ರಾಗೌಡ ಜಾಮೀನು ಅರ್ಜಿ ವಜಾ – A1 ಆರೋಪಿಗೆ ಜೈಲು ಫಿಕ್ಸ್‌!

Vijayalakshmi 1

ವಕೀಲರ ಜೊತೆಗೆ ದರ್ಶನ್‌ ಭೇಟಿ:
ರೇಣುಕಾಸ್ವಾಮಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನ ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಶೀಫ್ಟ್‌ ಮಾಡಲಾಗಿತ್ತು. ಇತ್ತ ಪೊಲೀಸರು ದರ್ಶನ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊತ್ತಿನಲ್ಲೇ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ.‌ KA-05 MA- 7999 ಕಾರಿನಲ್ಲಿ ಪುತ್ರ ವಿನೀಶ್‌ ಹಾಗೂ ದರ್ಶನ್‌ ಪರ ವಕೀಲರೊಂದಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್‌ರನ್ನ 8ನೇ ಬಾರಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದರು. ಪ್ರತಿ ವಾರ ಪುತ್ರ ವಿನೀಶ್‌ ಜೊತೆಗೆ ದರ್ಶನ್‌ರನ್ನ ಭೇಟಿಯಾಗಿ ಸಮಾಧಾನ ಹೇಳುತ್ತಿದ್ದರು.

ಇದೀಗ ದರ್ಶನ್‌ರನ್ನ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ 3ನೇ ದಿನ ವಿಜಯಲಕ್ಷ್ಮಿ ಅವರು, ದರ್ಶನ್‌ರನ್ನ ಭೇಟಿಯಾಗಿದ್ದಾರೆ. ದರ್ಶನ್‌ ಆರೋಗ್ಯ ವಿಚಾರಿಸಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆಯೂ ದರ್ಶನ್‌ ಜೊತೆಗೆ ಚರ್ಚಿಸಿದ್ದಾರೆ. ಇದೇ ವೇಳೆ ನಿಮ್ಮೊಂದಿಗೆ ನಾನಿದ್ದೇನೆ ಅಂತ ಅಭಯವನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೇ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ದರ್ಶನ್‌ಗೆ ನೀಡಿರುವ ಸೌಲಭ್ಯ ಹಾಗೂ ಜೈಲು ನಿಯಮ ಪಾಲನೆ ಬಗ್ಗೆ ಬೆಳಗಾವಿ ಉತ್ತರ ವಲಯ ಡಿಐಜಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ‘ಮೆಜೆಸ್ಟಿಕ್-2’ ಚಿತ್ರದಲ್ಲಿ ಮಾಲಾಶ್ರೀ : ಗುಣಗಾನ ಸಾಂಗ್ ನಲ್ಲಿ ಆ್ಯಕ್ಷನ್ ಕ್ವೀನ್

Share This Article