ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮಾಡಿರುವ ಟ್ವೀಟ್ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಜಯಲಕ್ಷ್ಮಿ ಅವರು, “ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗ ದೇವಿ ಇರುತ್ತಾಳೆ. ದೇಗುಲದಲ್ಲಿರುವ ದೇವಿಯನ್ನು ಪೂಜಿಸುವ ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಿರಿ” ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಈಗ ವಿಜಯಲಕ್ಷ್ಮಿ ಅವರು ಮಾಡಿರುವ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Advertisement
Advertisement
ಸದ್ಯಕ್ಕೆ ಸ್ಯಾಂಡಲ್‍ವುಡ್ ನಲ್ಲಿ ತಮಗಾದ ಅನ್ಯಾಯವನ್ನ ಹೇಳಿಕೊಳ್ಳಲು ಮೀಟೂ ಒಂದೊಳ್ಳೆ ವೇದಿಕೆಯಾಗಿದೆ ಅಂತ ಬಹುತೇಕ ಎಲ್ಲಾ ಕ್ಷೇತ್ರಗಳ ಮಹಿಳೆಯರು ತಮಗಾದ ಲೈಂಗಿಕ ಶೋಷಣೆಯ ಅಳಲು ತೋಡಿಕೊಂಡಿದ್ದಾರೆ. ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್ ಮಾಡಿರುವುದು ಮೀಟೂ ಅಭಿಯಾನದಲ್ಲಿ ಮಹಿಳೆಯರ ಪರವಾಗಿದ್ದೇನೆ ಎಂಬಂತಿದೆ. ವಿಜಯಲಕ್ಷ್ಮಿ ಅವರು ನೇರವಾಗಿ ಮೀಟೂ ಅಭಿಯಾನದ ಕುರಿತು ಮಾತನಾಡಿಲ್ಲ. ಬದಲಾಗಿ ನವರಾತ್ರಿಗೆ ಎಲ್ಲಾ ಮಹಿಳೆಯರಿಗೆ ಶುಭಾಶಯವನ್ನು ತಿಳಿಸಿದ್ದಾರೆ.
Advertisement
ಈ ಹಿಂದೆ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಕಿರುಕುಳ ನೀಡುತ್ತಿದ್ದರು. ವಿಜಯಲಕ್ಷ್ಮಿ ಜೊತೆಯಿರುವ ಫೋಟೋಗೆ `ಮೈ ಲೈಫ್’ ಎಂದು ಕಿಡಿಗೇಡಿಯೊಬ್ಬ ಟ್ಯಾಗ್ ಮಾಡಿದ್ದನು. ಅಲ್ಲದೇ ಫೋಟೋ ಟ್ಯಾಗ್ ಮಾಡಿ ಕೀಳುಮಟ್ಟದ ಅಶ್ಲೀಲ ಪದವನ್ನು ಕೂಡ ಬಳಸಿದ್ದನು.
Advertisement
ಈ ಬಗ್ಗೆ ನಕಲಿ ಖಾತೆ ಮೂಲಕ ನನ್ನ ಹಾಗೂ ಕುಟುಂಬಸ್ಥರ ಫೋಟೋಗಳನ್ನು ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 354(ಆ),354ಂ(1)(iv),(505)(507)(420)ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
There is a ‘Durga ‘ in every woman.
Learn to respect her, before worshiping goddess in a temple.#HappyNavratri
— Vijayalakshmi darshan (@vijayaananth2) October 16, 2018