ಬಾಗಲಕೋಟೆ: ಮಾಜಿ ಸಚಿವ ಎಚ್ ವೈ ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಸಂತ್ರಸ್ಥ ಮಹಿಳೆ ವಿಜಯಲಕ್ಷ್ಮಿ ಮನೆಯಲ್ಲಿರುವಾಗ ನಿದ್ರೆ ಮಾತ್ರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು 108 ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ವಿಜಯಲಕ್ಷ್ಮಿ ಸ್ಪಂದಿಸಿದ್ದಾರಾದ್ರೂ, ಆತ್ಮಹತ್ಯೆ ಯತ್ನಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ.
Advertisement
ಘಟನೆ ಕುರಿತಂತೆ ಸಂತ್ರಸ್ತೆ ಸಂಬಂಧಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮೇಟಿ ರಾಸಲೀಲೆ ಪ್ರಕರಣದಿಂದ ಸಾಕಾಗಿ ಹೋಗಿದೆ. ಪ್ರಕರಣದಿಂದ ನಾವು ಜೀವಂತ ಹೆಣವಾಗಿದ್ದೇವೆ. ಅವಳಿಗೆ ಜೀವಬೆದರಿಕೆ ಇರೋದು ನಿಜ. ಆದರೆ ಯಾರಿಂದ ಅಂತ ಗೊತ್ತಿಲ್ಲ. ಅದಕ್ಕಾಗಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಯಾರಿಂದ ಜೀವಬೆದರಿಕೆ ಅಂತ ಆಕೆಯೇ ಉತ್ತರಿಸಬೇಕು. ಈ ಪ್ರಕರಣ ಮತ್ತು ಇವಳಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಮೇಟಿ ನಮಗೆ ಮಾವನಾಗಬೇಕು ಇವಳು ಸೊಸೆಯಾಗಬೇಕು ಅಂತ ಹೇಳಿದ್ದಾರೆ.
Advertisement
ಇದನ್ನೂ ಓದಿ: ಎಚ್.ವೈ ಮೇಟಿ ರಾಸಲೀಲೆ ಕೇಸ್: ಪ್ರಕರಣದ ಸಂತ್ರಸ್ತೆಯಿಂದ ಹೊಸ ಬಾಂಬ್
Advertisement
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತೆ, 15 ದಿನಗಳ ಹಿಂದೆ ಮೇಟಿ ಬೆಂಬಲಿಗರಿಂದ ಜೀವಬೆದರಿಕೆ ಕರೆ ಬಂದಿತ್ತು. ಇದರಿಂದ ಡಿಪ್ರೆಷನಗೆ ಒಳಗಾಗಿದ್ದೆ. ಆದುದರಿಂದ ಹೀಗೆ ಜೀವ ಕಳೆದುಕೊಳ್ಳೊದಕ್ಕಿಂತ ನಾನೇ ಸಾಯೋದು ಮೇಲು ಎಂದು ತೀರ್ಮಾನಿಸಿದೆ. ಆದ್ದರಿಂದ ಆತ್ಮಹತ್ಯೆಗೆ ಯತ್ನ ಮಾಡಿದ್ದೇನೆ ಅಂತ ಹೇಳಿದ್ರು. ಆದ್ರೆ ಅವರು ಮೇಟಿ ಬೆಂಬಲಿಗರ ಹೆಸರು ಹೇಳಲು ನಿರಾಕರಿಸಿದ್ದಾರೆ.
Advertisement
https://www.youtube.com/watch?v=hc-doDLDtB4