ಪರಪ್ಪನ ಅಗ್ರಹಾರ ಜೈಲಲ್ಲಿರುವ ದರ್ಶನ್ (Darshan) ನೆನಪಿನಲ್ಲಿ ಜಾರಿದ್ದಾರೆ ಪತ್ನಿ ವಿಜಯಲಕ್ಷ್ಮಿ. ಮಂಗಳವಾರ ಸೆಷನ್ಸ್ ಕೋರ್ಟ್‌ನಲ್ಲಿ ಜೈಲಾಧಿಕಾರಿಗಳ ವಿರುದ್ಧ ದರ್ಶನ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ವಾದ ಪ್ರತಿವಾದಗಳು ನಡೆಯುತ್ತಿದ್ದರೆ ಇನ್ನೊಂದು ಕಡೆ ವಿಜಯಲಕ್ಷ್ಮಿ (Vijalakshmi) ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್ ಫೋಟೋಗಳನ್ನ ಪೋಸ್ಟ್ ಮಾಡಿ ಪತಿಯ ನೆನಪಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಜಗಳ ಕಿಕ್‌ಸ್ಟಾರ್ಟ್ – ಗಿಲ್ಲಿ ನಟ ತರಾಟೆಗೆ ತೆಗೆದುಕೊಂಡ ಅಶ್ವಿನಿ ಗೌಡ
ಕಳೆದ ಜುಲೈನಲ್ಲಿ ಡೆವಿಲ್ (Devil) ಚಿತ್ರದ ಶೂಟಿಂಗ್‌ಗಾಗಿ ಅನುಮತಿ ಪಡೆದುಕೊಂಡು ದರ್ಶನ್ ಥಾಯ್ಲೆಂಡ್‌ಗೆ ತೆರಳಿದ್ದರು. ಹಾಡಿನ ಚಿತ್ರೀಕರಣ ಮುಗಿದ ಬಳಿಕ ಅಲ್ಲಿಯೇ ಹೆಚ್ಚುವರಿ ಸಮಯ ಇದ್ದುಕೊಂಡು ಪ್ರವಾಸವನ್ನೂ ಮುಗಿಸಿದ್ದರು ದರ್ಶನ್. ಆ ವೇಳೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಕೂಡ ದರ್ಶನ್ ಜೊತೆಯಲ್ಲಿ ಪ್ರವಾಸಕ್ಕೆ ಹೋಗಿದ್ದರು.
ಈಗ ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಡವಾಗಿ ಪೋಸ್ಟ್ ಮಾಡಿಕೊಂಡು ಪತಿಯ ನೆನಪಿಗೆ ಜಾರಿದ್ದಾರೆ. ಇದನ್ನೂ ಓದಿ: ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದು ಬೇಡ – ಹೈದ್ರಾಬಾದ್‌ನಲ್ಲಿ ಕನ್ನಡ ಮಾತಾಡಿದ್ದಕ್ಕೆ ರಿಷಬ್ ಸ್ಪಷ್ಟನೆ

