ತಮಿಳಿನ ಜನಪ್ರಿಯ ಜೋಡಿ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ನಟಿಸುವುದಕ್ಕಾಗಿ ಬರೋಬ್ಬರಿ 14 ವರ್ಷಗಳನ್ನು ತಗೆದುಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ನಂತರ ಈ ಜೋಡಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿಯಾಗಿದೆ. ಕಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿದ್ದ ಇವರು, ಕಾರಣಾಂತರಗಳಿಂದ ಮತ್ತೆ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ.
Advertisement
ಇದೀಗ ಲೋಕೇಶ್ ಕನಕರಾಜ್ ಅವರು ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದರೆ, ವಿಜಯ್ ನಾಯಕ. ಈಗಾಗಲೇ ಸದ್ದಿಲ್ಲದೇ ಚೆನ್ನೈನಲ್ಲಿ ಸಿನಿಮಾ ಕೂಡ ಸೆಟ್ಟೇರಿದೆ. ಸದ್ಯಕ್ಕೆ ಈ ಸಿನಿಮಾಗೆ ದಳಪತಿ 67 ಎಂಬ ಹೆಸರಿನಲ್ಲಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟೈಟಲ್ ಅನ್ನು ಬಹಿರಂಗ ಪಡಿಸಲಿದ್ದಾರಂತೆ ಚಿತ್ರತಂಡ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್
Advertisement
Advertisement
ವಿಜಯ್ ಮತ್ತು ತ್ರಿಷಾ ನಟನೆಯ ಕೊನೆಯ ಸಿನಿಮಾ 2008ರಲ್ಲಿ ರಿಲೀಸ್ ಆಗಿತ್ತು. ಕುರುವಿ ಹೆಸರಿನ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಆದರೆ, ಜೋಡಿ ಮಾತ್ರ ಸಖತ್ತಾಗಿತ್ತು. ಯಾಕೆಂದರೆ, ಈ ಹಿಂದೆ ಇದೇ ಜೋಡಿ ಗಿಲ್ಲಿ, ಆದಿ, ತಿರುಪಾಚ್ಚಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಕುರುವಿ ನಂತರ ಇವರು ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಕುತೂಹಲವಂತೂ ಮೂಡಿದೆ.