ನವದೆಹಲಿ: ಖಾಸಗಿ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಆಸ್ಟ್ರೇಲಿಯಾ ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ಹೊರ ಉಳಿದಿದ್ದಾರೆ. ಈಗಾಗಲೇ ಇಬ್ಬರು ಆಟಗಾರರನ್ನು ತನಿಖೆ ಅಂತಿಮವಾಗುವರೆಗೂ ಕ್ರಿಕೆಟ್ ನಿಂದ ಹೊರ ಉಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಹಾರ್ದಿಕ್ ಮತ್ತು ಕೆ.ಎಲ್.ರಾಹುಲ್ ಸ್ಥಾನವನ್ನು ಶುಭಮನ್ ಗಿಲ್ ಮತ್ತು ತಮಿಳುನಾಡಿನ ಆಲ್‍ರೌಂಡರ್ ವಿಜಯ್ ಶಂಕರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಕಿರಿಯರ ವಿಶ್ವಕಪ್ ಗೆದ್ದ ತಂಡದ ನಾಯಕನಾಗಿದ್ದ ಶುಭಮನ್ ಗಿಲ್ ನ್ಯೂಜಿಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ: ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ
Advertisement
Advertisement
ಈ ಹಿಂದೆ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಗಿಲ್, 2018 ವರ್ಷ ನನಗೆ ಎಲ್ಲವನ್ನು ನೀಡಿದೆ. 2018ರಲ್ಲಿ ಹೊಸತನವನ್ನು ಹಿರಿಯರ ಮಾರ್ಗದರ್ಶನದಲ್ಲಿ ಕಲಿಯುವ ಅವಕಾಶ ನನ್ನದಾಗಿತ್ತು. 2019ರಲ್ಲಿ ಭಾರತದ ಪರವಾಗಿ ಹಿರಿಯರ ತಂಡದಲ್ಲಿ ಆಡಬೇಕೆಂಬ ಆಸೆ ಇದೆ. ಅದುವೇ ನನ್ನ ಮುಖ್ಯ ಗುರಿ ಅಂತಾ ಹೇಳಿಕೊಂಡಿದ್ದರು. ಇದನ್ನು ಓದಿ: ನಾನು ಇಂಜಿನಿಯರಿಂಗ್ ಮಾಡದಕ್ಕೆ ಈಗಲೂ ಅಮ್ಮನಿಗೆ ದುಃಖವಿದೆ: ಕೆಎಲ್ ರಾಹುಲ್
Advertisement
27 ವರ್ಷದ ವಿಜಯ್ ಶಂಕರ್ ನಿದಾ ಹಸ ಟ್ರೋಫಿಯಲ್ಲಿ ಭಾರತದ ಪರವಾಗಿ ಆಡಿದ್ದರು. ವಿಜಯ್ ಶಂಕರ್ ಇದೂವರೆಗೂ 5 ಟಿ-ಟ್ವೆಂಟಿ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಡಿಲೇಡ್ ನಲ್ಲಿ ನಡೆಯುವ ಏಕದಿನ ಪಂದ್ಯದಲ್ಲಿ ವಿಜಯ್ ಶಂಕರ್ ಟೀಂ ಇಂಡಿಯಾವನ್ನು ಸೇರ್ಪಡೆಯಾಗುವ ಸಾಧ್ಯತೆಗಳಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv