ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಕಾರ್ಯಕ್ರಮಕ್ಕೆ ಗಾಯಕ ವಿಜಯ್ ಪ್ರಕಾಶ್ ಮರಳುತ್ತಿದ್ದಾರೆ.
‘ಸರಿಗಮಪ’ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಜೊತೆ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ತೀರ್ಪುಗಾರಾಗಿದ್ದಾರೆ. ಆದರೆ ಕೆಲವು ವಾರಗಳಿಂದ ವಿಜಯ್ ಪ್ರಕಾಶ್ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ. ಇದರಿಂದ ಅವರ ಅಭಿಮಾನಿಗಳು ಬೇಸರಗೊಂಡಿದ್ದರು.
ಮುಂದಿನ ವಾರದಿಂದ ತಪ್ಪದೆ ಬರುವೆ . https://t.co/9AtBnKr8Ic
— vijay prakash (@rvijayprakash) June 1, 2019
ವಿಜಯ್ ಪ್ರಕಾಶ್ ಕಾರ್ಯಕ್ರಮಕ್ಕೆ ಗೈರಾಗಿರುವುದನ್ನು ಗಮನಿಸಿದ ವೀಕ್ಷಕರು ನೀವು ಏಕೆ ಕಾರ್ಯಕ್ರಮಕ್ಕೆ ಬರುತ್ತಿಲ್ಲ? ನೀವು ಕಾರ್ಯಕ್ರಮಕ್ಕೆ ಯಾವಾಗ ಹಿಂತಿರುಗುತ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಪ್ರಶ್ನಿಸಿದ್ದರು.
Next week sir https://t.co/lkdL080n1X
— vijay prakash (@rvijayprakash) June 1, 2019
ವೀಕ್ಷಕರ ಪ್ರಶ್ನೆಗೆ ವಿಜಯ್ ಪ್ರಕಾಶ್ ಪ್ರತಿಕ್ರಿಯಿಸಿ, ಮುಂದಿನ ವಾರ ಕಾರ್ಯಕ್ರಮಕ್ಕೆ ಮರಳುವುದಾಗಿ ಹೇಳಿದ್ದಾರೆ. ಅಲ್ಲದೆ ಇಷ್ಟು ಸಂಚಿಕೆಗಳಲ್ಲಿ ಏಕೆ ಬಂದಿಲ್ಲ ಎಂಬುದನ್ನು ಕೂಡ ಕಾರ್ಯಕ್ರಮದಲ್ಲೇ ಹೇಳುವುದಾಗಿ ರೀ-ಟ್ವೀಟ್ ಮಾಡಿದ್ದಾರೆ.
Coming week I will be there and also share the reason . Thx https://t.co/8oIDru9y2x
— vijay prakash (@rvijayprakash) June 2, 2019
ಏಪ್ರಿಲ್ 7ರಂದು ವಿಜಯ್ ಪ್ರಕಾಶ್ ಅವರ ತಂದೆ ವಿದ್ವಾನ್ ಎಲ್ ರಾಮಶೇಷ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ತಂದೆ ನಿಧನರಾಗಿದ್ದಾಗ ವಿಜಯ್ ಅವರು ಅಮೆರಿಕ ಪ್ರವಾಸದಲ್ಲಿದ್ದರು. ಈ ವಿಷಯ ತಿಳಿದ ತಕ್ಷಣ ವಿಜಯ್ ಅವರು ಅಮೆರಿಕದಿಂದ ಹಿಂತಿರುಗಿದ್ದರು.
ಇಲ್ಲೇ ಇದ್ದೀನಿ ಸಾರ್ . ಬರ್ತೀನಿ . https://t.co/Jn4ICMdtHG
— vijay prakash (@rvijayprakash) June 3, 2019