ನವದೆಹಲಿ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ ಮಲ್ಯರವರು ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ ಮಾತನಾಡಿದ್ದೆ ಎನ್ನುವ ಹೇಳಿಕೆ ರಾಜಕೀಯ ವಲಯದಲ್ಲಿ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
9 ಸಾವಿರ ಕೋಟಿ ಸಾಲ ಮಾಡಿ ಬ್ರಿಟನ್‍ನಲ್ಲಿ ತಲೆ ಮರೆಸಿಕೊಂಡಿರೋ ಮದ್ಯದ ದೊರೆ ವಿಜಯ್ ಮಲ್ಯ, ತಾನು ಲಂಡನ್‍ಗೆ ಹೋಗುವ ಮೊದಲು ಅರುಣ್ ಜೇಟ್ಲಿಯನ್ನು ಭೇಟಿಯಾಗಿದ್ದೆ. ಈ ವೇಳೆ ಎಲ್ಲ ಬಾಕಿ ಚುಕ್ತಾ ಮಾಡೋದಾಗಿ ಭರವಸೆ ಕೂಡ ನೀಡಿದ್ದೆ ಅಂತ ಹೇಳಿಕೆ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Advertisement
Vijaya Mallya met Arun Jaitley before leaving the country! By any chance Arun Jaitley runs a travel agency which hands over the final travel documents? https://t.co/eXxWvmaas1
— Karnataka Congress (@INCKarnataka) September 12, 2018
Advertisement
ಈ ಕುರಿತು ವಿಜಯ್ ಮಲ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ವಿಜಯ್ ಮಲ್ಯ ಹೇಳಿಕೆ ಶುದ್ಧ ಸುಳ್ಳು. ನಾನು ಮಲ್ಯಗೆ ಯಾವುದೇ ಭೇಟಿಯ ಅವಕಾಶವನ್ನೇ ಕೊಟ್ಟಿರಲ್ಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗೋದು ಎಲ್ಲಿಂದ ಬಂತು ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
Advertisement
ಅರುಣ್ ಜೇಟ್ಲಿ ಹೇಳಿಕೆಯಿಂದ ಕೂಡಲೇ ಎಚ್ಚೆತ್ತ ಮಲ್ಯರವರು, ಸಂಸತ್ತಿನಲ್ಲಿ ಒಮ್ಮೆ ಜೇಟ್ಲಿ ಅವರು ಸಿಕ್ಕಿದ್ದರು. ಆಗ ಹೇಳಿದ್ದೆ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯಿಂದ ಜಾರಿಕೊಂಡಿದ್ದಾರೆ. ವಿಜಯ್ ಮಲ್ಯ ಹೇಳಿಕೆಯನ್ನೆ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರವು ಲೂಟಿ ಹೊಡೆಯಲು ಅವಕಾಶ ಕೊಟ್ಟಿದ್ದಲ್ಲದೇ, ಎಸ್ಕೇಪ್‍ಗೂ ಕೇಂದ್ರ ಕುಮ್ಮಕ್ಕಿದೆ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ: ವಿಜಯ್ ಮಲ್ಯ
Advertisement
I can confirm to you that nobody tipped me off. There was no need to run and the allegations are media created allegations: Vijay Mallya, outside London's Westminster Magistrate's Court when asked if he was tipped off by someone to run pic.twitter.com/LIWCv9s158
— ANI (@ANI) September 12, 2018
ಮುಂಬೈ ಅರ್ಥರ್ ರೋಡ್ ಜೈಲಿನ ಕೋಣೆ ಬಗ್ಗೆ ವೆಸ್ಟ್ ಮಿನಿಸ್ಟರ್ ಕೋರ್ಟ್ ಹಾಗೂ ದೇಶದ್ರೋಹಿ ಮಲ್ಯ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಮಲ್ಯ ಹಸ್ತಾಂತರ ಸಂಬಂಧ ಡಿಸೆಂಬರ್ 10ಕ್ಕೆ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Over a period of time, I have met many colleagues in Parliament & expressed to them my desire to settle with the banks. I don't believe I owe you any further details: Vijay Mallya in London, when asked 'did you meet any other BJP leader before you left for London?' pic.twitter.com/l2xW2hKmlj
— ANI (@ANI) September 12, 2018