ನಾಳೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ವಿಜಯ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಬೇಕಿದೆ. ಅದಕ್ಕೂ ಎರಡು ದಿನ ಮುನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿ, ಸಂಚಲನ ಸೃಷ್ಟಿಸಿದ್ದಾರೆ ವಿಜಯ್. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ
Advertisement
ವಿಜಯ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ವರ್ಷಗಳಿಂದ ತಮಿಳುನಾಡಿನಲ್ಲಿ ಹರಿದಾಡುತ್ತಲೇ ಇದೆ. ವಿಜಯ್ ಹೆಸರಿನಲ್ಲೇ ಪಕ್ಷವೊಂದನ್ನು ಅವರ ತಂದೆ ಸ್ಥಾಪಿಸಿದ್ದರು. ಆ ಪಕ್ಷದಲ್ಲಿ ನಾನು ಸಕ್ರೀಯನಾಗಿಲ್ಲ ಎಂದು ವಿಜಯ್ ಹೇಳಿದ್ದರೂ, ಅವರ ಹೆಸರಿನಲ್ಲಿಯೇ ಅನೇಕ ಚಟುವಟಿಕೆಗಳು ಆ ಪಕ್ಷದಲ್ಲಿ ನಡೆದಿವೆ. ಅಲ್ಲದೇ, ಕಳೆದ ಬಾರಿ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ವಿಜಯ್ ಅವರ ತಂದೆಯ ಪಕ್ಷ ಸ್ಪರ್ಧಿಸಿತ್ತು. ಆ ವೇಳೆ ತಮ್ಮ ಫೋಟೋವನ್ನು ಬಳಸಿಕೊಳ್ಳಲು ವಿಜಯ್ ಅನುಮತಿ ಕೊಟ್ಟಿದ್ದರು. ಈಗ ತಾವೂ ರಾಜಕೀಯ ಪ್ರವೇಶ ಮಾಡುವ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!
Advertisement
Advertisement
‘ಬೀಸ್ಟ್’ ಸಿನಿಮಾಗೆ ಸಂಬಂಧಿಸಿದ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್, ‘ನಾನು ರಾಜಕೀಯ ರಂಗಕ್ಕೆ ಬರಬೇಕು ಎನ್ನುವುದು ನನ್ನ ಅಭಿಮಾನಿಗಳಿಗೆ ಆಸೆಯಿದೆ. ಹಲವು ಬಾರಿ ಅವರು ನನ್ನನ್ನು ಒತ್ತಾಯಿಸಿದ್ದಾರೆ. ಅವರು ಆಸೆ ಪಟ್ಟರೆ ಖಂಡಿತಾ ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ’ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ರಾಜಕಾರಣಿ ಆಗುತ್ತೇನೆ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್
Advertisement
ವಿಜಯ್ ಈಗಾಗಲೇ ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾನಾ ಪಕ್ಷಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಪೆಟ್ರೊಲ್, ಡಿಸೈಲ್ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಸೈಕಲ್ ಮೇಲೆ ಸವಾರಿ ಮಾಡಿ ಮತದಾನ ಮಾಡಿದ್ದರು ವಿಜಯ್, ಅವರ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ, ನಾಡು, ನುಡಿಗೆ ತೊಂದರೆ ಆದಾಗಲೂ ಅವರು ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಾಗಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ. ಮುಂದಿನ ದಿನಗಳಲ್ಲಿ ಅವರು ಈಡೇರಿಸುವುದರಲ್ಲಿ ಅಚ್ಚರಿಯಿಲ್ಲ.