ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ರು ವಿಜಯ್ ದೇವರಕೊಂಡ

Public TV
1 Min Read
vijaydevarakonda

ಟಾಲಿವುಡ್‌ನ (Tollywood) ಹಾಟ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಮತ್ತೆ ಸುದ್ದಿಯಲ್ಲಿದ್ದಾರೆ. ಲೈಗರ್ (Liger) ಸೋಲಿನ ನಂತರ ವಿಜಯ್ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಧನ್ಯವಾದ ತಿಳಿಸಲು ರೆಡಿಯಾಗಿದ್ದಾರೆ.

vijay devarakonda 2

ವಿಜಯ್ ದೇವರಕೊಂಡ ಅವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಏನಾದರೂ ವಿಶೇಷ ಗಿಫ್ಟ್ ಕೊಡಬೇಕೆಂದು ನಿರ್ಧರಿಸಿ, 100 ಮಂದಿಗೆ ಉಚಿತ ಪ್ರವಾಸ ಮಾಡಿಸಲು ಯೋಚಿಸಿದ್ದಾರೆ. 5 ದಿನಗಳ ಕಾಲ ಮನಾಲಿಗೆ 100 ಜನ ಅಭಿಮಾನಿಗಳನ್ನ ಕಳುಹಿಸಲು ನಿರ್ಧರಿಸಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವಿಜಯ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಗೆಲುವಿಗೆ ಕೊರಗಜ್ಜನ ಆಶೀರ್ವಾದವೇ ಕಾರಣ: ರೂಪೇಶ್ ಶೆಟ್ಟಿ

vijay devarakonda 3

ಈ ಸ್ಪರ್ಧೆಯಲ್ಲಿ ಸೆಲೆಕ್ಟ್ ಆದ ಅದೃಷ್ಟಶಾಲಿಗೆ ಬಗೆಬಗೆಯ ಉಡುಗೊರೆಗಳನ್ನ ವಿಜಯ್, ಆಫರ್ ಮಾಡಲಿದ್ದಾರೆ. ದೊಡ್ಡ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿದ್ದು, ಗೆದ್ದವರಿಗೆ ಸ್ಥಳ ಆಯ್ಕೆ ಮಾಡುವ ಅವಕಾಶವನ್ನು ಫ್ಯಾನ್ಸ್‌ಗೆ ನೀಡಿದ್ದಾರೆ. ಜೊತೆಗೆ ಇದೀಗ ಆಯ್ಕೆಯಾದ ಅಭಿಮಾನಿಗಳನ್ನ ಮನಾಲಿಗೆ ಕಳುಹಿಸಿದ್ದಾರೆ.

ಇನ್ನೂ `ಲೈಗರ್’ ಸೋಲಿನ ಬೆಂದಿರುವ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *