`ಲೈಗರ್’ ಸೋಲಿನ ಬಳಿಕ ಕಮ್‌ಬ್ಯಾಕ್ ಮಾಡಿ ಎಂದವರಿಗೆ ವಿಜಯ್ ಖಡಕ್ ಉತ್ತರ

Advertisements

ಟಾಲಿವುಡ್‌ನ(Tollywood) ಸ್ಟಾರ್ ವಿಜಯ್ ದೇವರಕೊಂಡ (Vijay Devarakonda) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. `ಲೈಗರ್'(Liger) ಸಿನಿಮಾ ಸೋಲಿಕ ಬಳಿಕ ಇದೀಗ ನಟ ಮೌನ ಮುರಿದಿದ್ದಾರೆ. ಮತ್ತೆ ಕಮ್‌ಬ್ಯಾಕ್ ಮಾಡಿ ಎಂದವರಿಗೆ ದೇವರಕೊಂಡ ಖಡಕ್ ಉತ್ತರ ಕೊಟ್ಟಿದ್ದಾರೆ.

Advertisements

ಚಿತ್ರರಂಗದಲ್ಲಿ ಗಾಡ್‌ಫಾದರ್ ಇಲ್ಲದೇ ಬೆಳದವರು ವಿಜಯ್ ದೇವರಕೊಂಡ ʻಅರ್ಜುನ್ ರೆಡ್ಡಿʼ (Arjun Reddy) ಮೂಲಕ ಸ್ಟಾರ್ ನಟನಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದರು. ಸಾಕಷ್ಟು ಚಿತ್ರಗಳ ಮೂಲಕ ಸೂಪರ್ ಸಕ್ಸಸ್ ಕಂಡಿದ್ದರು. ಇತ್ತೀಚಿನ `ಲೈಗರ್’ ಸೋಲಿನ ನಂತರ ವಿಜಯ್ ಫುಲ್ ಸೈಲೆಂಟ್ ಆಗಿಬಿಟ್ಟಿದ್ದರು. ಇದೀಗ ಮೊದಲ ಬಾರಿಗೆ ಚಿತ್ರದ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ.

Advertisements

`ಲೈಗರ್’ ಚಿತ್ರದ ಸೋಲಿನ ನಂತರ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದ ವಿಜಯ್ ಇತ್ತೀಚೆಗೆ ಈವೆಂಟ್‌ವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಾನು ಎಲ್ಲೇ ಹೋದರು ಅಭಿಮಾನಿಗಳು ಕಮ್ ಬ್ಯಾಕ್ ಮಾಡಿ ಎನ್ನುತ್ತಲೇ ಇರುತ್ತಾರೆ. ನಾನು ನಿಮಗೆ ಒಂದು ಹೇಳಲು ಬಯಸುತ್ತೇನೆ. ಕಮ್‌ಬ್ಯಾಕ್ ಮಾಡಲು ನಾನೇಲ್ಲೂ ಹೋಗಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಲೋಹಿತಾಶ್ವ ವಿಧಿವಶ

Advertisements

ಸದ್ಯ ವಿಜಯ್, ಸಮಂತಾ ಜೊತೆ ʻಖುಷಿʼ ಚಿತ್ರದ ಮೂಲಕ ಬರುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಮಾಹಿತಿ ಸಿಗಲಿದೆ.

Live Tv

Advertisements
Exit mobile version