Bengaluru CityCinemaLatestMain PostSouth cinema

ನಡುರಸ್ತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟ ವಿಜಯ್ ದೇವರಕೊಂಡ

ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ರಾಜ್ಯದೆಲ್ಲೆಡೆ ಅಭಿಮಾನಿಗಳಿದ್ದಾರೆ. ಅದರಲ್ಲೂ ವಿಜಯ್‌ಗೆ ಫೀಮೇಲ್ ಫ್ಯಾನ್ಸ್ ಜಾಸ್ತಿ. ಇದೀಗ ನಡುರಸ್ತೆಯಲ್ಲಿ `ಅರ್ಜುನ್ ರೆಡ್ಡಿ’ ಸ್ಟಾರ್ ವಿಜಯ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

vijaydevarakonda

ದಕ್ಷಿಣದ ಸ್ಟಾರ್ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿಜಯ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ವಿಜಯ್ ಸಿನಿಮಾಗಾಗಿಯೇ ಕಾದು ಕೂರುವ ಫ್ಯಾನ್ಸ್ ಕೂಡ ಇದ್ದಾರೆ. ಇತ್ತೀಚೆಗೆ ಚಿತ್ರದ ಪ್ರಚಾರವೊಂದಕ್ಕೆ ವಿಜಯ್ ದೇವರಕೊಂಡ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕ್ರೇಜಿ ಫೀಮೇಲ್ ಫ್ಯಾನ್ ಒಬ್ಬರು ವಿಜಯ್ ಅವರನ್ನ ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ನಡುರಸ್ತೆಯಲ್ಲಿ ಯುವತಿ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಕಾಫಿನಾಡು ಚಂದುಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಅನುಶ್ರೀ

ಈ ವೇಳೆ ಅಭಿಮಾನಿಯೊಬ್ಬರು, ವಿಜಯ್‌ಗೆ ಉಂಗುರ ಕೊಟ್ಟಿದ್ದಾರೆ. ಸಂತೋಷದಿಂದ ಮಂಡಿಯೂರಿ ಸ್ವೀಕರಿಸಿದ್ದಾರೆ. ನೆಚ್ಚಿನ ನಟನನ್ನ ನೋಡಿ ಅಭಿಮಾನಿ ಭಾವುಕರಾಗಿದ್ದಾರೆ. ಅಭಿಮಾನಿಯ ಆಸೆಯಂತೆ, ಆಕೆಯ ಕೈಯಿಂದ ಉಂಗುರ ತೊಡಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Live Tv

Leave a Reply

Your email address will not be published.

Back to top button