ಹೈದರಾಬಾದ್: ಲಾಕ್‍ಡೌನ್ ಸಮಯದಲ್ಲಿ ಸದ್ಯ ಮನೆಯಲ್ಲಿಯೇ ಇರುವ ಸೆಲೆಬ್ರಿಟಿಗಳು #BeARealMan ಎಂಬ ಚಾಲೆಂಜ್ ಸ್ವೀಕರಿಸಿ, ಎಂಜಾಯ್ ಮಾಡುತ್ತಿದ್ದಾರೆ. ಈ ಸಾಲಿಗೆ ಈಗ ಟಾಲಿವುಡ್ ನಟ ವಿಜಯ್ ದೇವರಕೊಂಡ ಕೂಡ ಸೇರಿಕೊಂಡಿದ್ದು, ಮನೆ ಕೆಲಸ ಮಾಡಿ ಮುದ್ದಿನ ಅಮ್ಮನಿಗೆ ಸಹಾಯ ಮಾಡಿ ಎಲ್ಲರ ಮನಗೆದ್ದಿದ್ದಾರೆ.
Advertisement
#BeARealMan ಚಾಲೆಂಜ್ ಸ್ವೀಕರಿಸಿದ ಸೆಲೆಬ್ರಿಟಿಗಳು ಮನೆಯಲ್ಲಿನ ಮಹಿಳೆಯರಿಗೆ ಸಹಾಯ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಸಿನಿ ಕಲಾವಿದರನ್ನು ಟ್ಯಾಗ್ ಮಾಡುತ್ತಾ ಚಾಲೆಂಜ್ ಪಾಸ್ ಮಾಡುತ್ತಿದ್ದಾರೆ. ಹೀಗೆ ನಿರ್ದೇಶಕ ಶಿವ ಕೊರಟಾಲ ಅವರು ವಿಜಯ್ ದೇವರಕೊಂಡ ಅವರಿಗೆ ಚಾಲೆಂಜ್ ಹಾಕಿದ್ದರು. ಇದನ್ನು ಸ್ವೀಕರಿಸಿದ ವಿಜಯ್ ಮನೆ ಕೆಲಸ ಮಾಡಿ, ಅಮ್ಮನಿಗೆ ಪ್ರೀತಿಯಿಂದ ಐಸ್‍ಕ್ರೀಮ್ ಕೂಡ ಮಾಡಿಕೊಟ್ಟಿದ್ದಾರೆ.
Advertisement
Bits of my day in lockdown 🙂
Documented by @ananddeverkonda#BeARealMan challenged by @sivakoratala sir. I would like to extend it to Kunjikkaa @dulQuer pic.twitter.com/8bLAAQYeMo
— Vijay Deverakonda (@TheDeverakonda) April 25, 2020
Advertisement
ಈ ಚಾಲೆಂಜ್‍ನ ವಿಡಿಯೋವೊಂದನ್ನು ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಲಾಕ್‍ಡೌನ್‍ನಲ್ಲಿ ನನ್ನ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ಒಂದು ಪುಟ್ಟ ವಿಡಿಯೋ ಇದು. ಆನಂದ್ ದೇವರಕೊಂಡ ಈ ವಿಡಿಯೋ ಮಾಡಿದ್ದಾರೆ. ನಿರ್ದೇಶಕ ಶಿವ ಕೊರಟಾಲ ನನಗೆ #BeARealMan ಚಾಲೆಂಜ್ ಹಾಕಿದರು. ನಾನೀಗ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರಿಗೆ ಚಾಲೆಂಜ್ ಪಾಸ್ ಮಾಡುತ್ತಿದ್ದೇನೆ ಎಂದು ವಿಜಯ್ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ.
Advertisement
ವಿಶೇಷ ಎಂದರೆ ವಿಜಯ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಮ್ಮ ಮನೆ ಹೇಗಿದೆ ಎನ್ನೋದನ್ನು ತೋರಿಸಿದ್ದಾರೆ. ಸಿನಿಮಾದಲ್ಲಿ ಬ್ಯುಸಿ ಇದ್ದಾದ ಹೆಚ್ಚು ಎಂದರೆ 6 ಗಂಟೆ ಕಾಲ ನಿದ್ದೆ ಮಾಡುತ್ತಿದ್ದೆ. ಆದ್ರೆ ಲಾಕ್‍ಡೌನ್‍ನಿಂದು ಈಗ ನಾನು ಒಂಬತ್ತುವರೆ ಗಂಟೆ ನಿದ್ದೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ವಿಜಯ್ ಪಾತ್ರೆ ತೊಳೆಯುವುದು, ಮನೆ ಕ್ಲೀನ್ ಮಾಡುವುದು ಹಾಗೂ ಅಮ್ಮನಿಗೆ ಪ್ರೀತಿಯಿಂದ ಮಾವಿನ ಹಣ್ಣಿನ ಐಸ್‍ಕ್ರೀಮ್ ಮಾಡಿಕೊಟ್ಟ ದೃಶ್ಯಗಳು ಸೆರೆಯಾಗಿದೆ. ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರು ಕೂಡ #BeARealMan ಚಾಲೆಂಜ್ ಸ್ವೀಕರಿಸಿದ್ದರು. ನಿರ್ದೇಶನದಲ್ಲಿ ಕಮಾಲ್ ಮಾಡಿದ್ದ ರಾಜಮೌಳಿ ಅವರು ಮನೆ ಕೆಲಸ ಮಾಡಿ ಭೇಷ್ ಎನಿಸಿಕೊಂಡಿದ್ದರು.
Task done, @imvangasandeep. Throwing the challenge to @tarak9999 and @AlwaysRamCharan..
And lets have some moooreee fun..
Am also challenging @Shobu_ garu, sukku @aryasukku and peddanna @mmkeeravaani..???????? #BetheREALMAN pic.twitter.com/DepkfDvzIE
— rajamouli ss (@ssrajamouli) April 20, 2020
ಅಷ್ಟೇ ಅಲ್ಲದೆ ಮೆಗಾಸ್ಟಾರ್ ಚಿರಂಜೀವಿ, ನಟ ರಾಮ್‍ಚರಣ್, ಜೂನಿಯರ್ ಎನ್‍ಟಿಆರ್, ನಟ ವೆಂಕಟೇಶ್ ಹೀಗೆ ಹಲವು ನಟರು, ನಿರ್ದೇಶಕರು, ಕಲಾವಿದರು ಈ ಚಾಲೆಂಜ್ ಸ್ವೀಕರಿಸಿ ರಿಯಲ್ ಮ್ಯಾನ್ ಆಗಿದ್ದಾರೆ.