BollywoodCinemaLatestMain PostSouth cinema

ವಿಜಯ್ ದೇವರಕೊಂಡ ಗರ್ಲ್ ಫ್ರೆಂಡ್ ಅನನ್ಯಾ ಪಾಂಡೆಗೂ ‘ಲೈಗರ್’ ಸೋಲಿನ ಎಫೆಕ್ಟ್

ನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ನ ಲೈಗರ್ ಸಿನಿಮಾ ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ. ಈ ಸಿನಿಮಾ ರಿಲೀಸ್ ಆಗಿ ಮೂರ್ನಾಲ್ಕು ದಿನದಲ್ಲೇ ನೂರು ಕೋಟಿ ರೂಪಾಯಿ ಕ್ಲಬ್ ಗೆ ಸೇರಲಿದೆ ಎಂಬ ಲೆಕ್ಕಾಚಾರವಿತ್ತು. ಹಾಗಾಗಿಯೇ ವಿಜಯ್ ದೇವರಕೊಂಡ ಧೈರ್ಯದಿಂದಲೇ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಎಲ್ಲ ನಿರೀಕ್ಷೆಯೂ ಹುಸಿ ಆಗಿವೆ.

ಲೈಗರ್ ಸೋಲನ್ನು ಒಪ್ಪಿಕೊಂಡಿರುವ ವಿಜಯ್ ದೇವರಕೊಂಡ, ತಾವು ಈ ಸಿನಿಮಾಗಾಗಿ ಪಡೆದಿದ್ದ ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಸ್ಸು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದೇ ಬಣ್ಣಿಸಲಾಗುತ್ತಿದೆ. ಈ ಸೋಲು ಕೇವಲ ವಿಜಯ್ ದೇವರಕೊಂಡ ಅವರನ್ನು ಮಾತ್ರ ಬಾಧಿಸುತ್ತಿಲ್ಲ, ನಾಯಕಿ ಅನನ್ಯಾ ಪಾಂಡೆ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಇದು ಅವರ ಚೊಚ್ಚಲು ಸಿನಿಮಾವಾಗಿದ್ದರೂ,  ಈ ಸಿನಿಮಾದಿಂದ ಅನನ್ಯಾ ಪಾಂಡೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲವೂ ಠುಸ್ ಪಟಾಕಿ ಆಗಿದೆ. ಇದನ್ನೂ ಓದಿ:ಮಿಸ್ ಮ್ಯಾಚ್ ಜೋಡಿ: ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್

ಲೈಗರ್ ಸಿನಿಮಾದ ಅಬ್ಬರ ನೋಡಿ ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾಗೆ ಅನನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಲೈಗರ್ ಲತ್ತೆ ಹೊಡೆಯುತ್ತಿದ್ದಂತೆಯೇ ಜ್ಯೂನಿಯರ್ ಅಂಡ್ ಟೀಮ್ ಅನನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರಂತೆ. ಹಾಗಾಗಿ ಜ್ಯೂನಿಯರ್ ಸಿನಿಮಾದಿಂದ ಅನನ್ಯಾರನ್ನು ಹೊರಹಾಕಲಾಗಿದೆ. ಅಲ್ಲದೇ, ಇನ್ನೂ ಹಲವು ನಿರ್ಮಾಪಕರು ಅನನ್ಯಾಗೆ ಅವಕಾಶ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮೊದಲ ಸಿನಿಮಾದಲ್ಲೇ ಬ್ರೇಕ್ ಗಾಗಿ ನಿರೀಕ್ಷೆ ಮಾಡುತ್ತಿದ್ದ ಅನನ್ಯಾಗೆ ಈ ಸಾರಿ ಬ್ಯಾಡ್ ಲಕ್ ಎನಬೇಕು ಅಷ್ಟೆ.

Live Tv

Leave a Reply

Your email address will not be published.

Back to top button