CinemaLatestMain PostSouth cinema

ಮಿಸ್ ಮ್ಯಾಚ್ ಜೋಡಿ: ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್

ರಡು ದಿನಗಳ ಹಿಂದೆಯಷ್ಟೇ ಹೊಸ ಬದುಕಿಗೆ ಕಾಲಿಟ್ಟಿರುವ ತಮಿಳಿನ ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇದೀಗ ಸಖತ್ ಟ್ರೋಲ್ ಆಗುತ್ತಿದ್ದಾರೆ. ಅದರಲ್ಲೂ ಮಿಸ್ ಮ್ಯಾಚ್ ಜೋಡಿ ಎಂದು ಕಾಮೆಂಟ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಯನ್ನು ಟ್ರೆಂಡ್ ಮಾಡಲಾಗುತ್ತಿದೆ. ಏನೇ ಟ್ರೋಲ್ ಮಾಡಿದರೂ, ಈ ದಂಪತಿ ತಲೆಕೆಡಿಸಿಕೊಳ್ಳದೇ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ನಟಿ ಮಹಾಲಕ್ಷ್ಮಿ ತುಂಬಾ ಸುಂದರವಾಗಿದ್ದಾರೆ. ಅಲ್ಲದೇ, ತೂಕ ಕೂಡ ಕಡಿಮೆಯಿದೆ. ಮಹಾಲಕ್ಷ್ಮಿಗಿಂತ ನಾಲ್ಕು ಪಟ್ಟು ತೂಕವಾಗಿದ್ದಾರೆ ರವೀಂದರ್. ಇದೇ ಕಾರಣಕ್ಕಾಗಿ ಕೆಲವರು ಇವರನ್ನು ಟ್ರೋಲ್ ಮಾಡಿ, ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ, ಬಹುತೇಕರು ಈ ಜೋಡಿಗೆ ಶುಭ ಹಾರೈಸಿದ ಕಾಮೆಂಟ್ ಗಳನ್ನೂ ಹಾಕುತ್ತಿದ್ದಾರೆ. ಇಬ್ಬರ ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

ಮಹಾಲಕ್ಷ್ಮಿಗೂ ಇದು ಎರಡನೇ ಮದುವೆ. ರವೀಂದರ್ ಕೂಡ ಈ ಹಿಂದೆ ಡಿವೋರ್ಸ್ ತಗೆದುಕೊಂಡವರು. ಇಬ್ಬರಿಗೂ ಇದು ಎರಡನೇ ಮದುವೆ ಆದ ಕಾರಣವು ಕೂಡ ಟ್ರೋಲ್ ಗೆ ಆಹಾರವಾಗಿದೆ. ಅಲ್ಲದೇ, ಮಿಸ್ ಮ್ಯಾಚ್ ಜೋಡಿಗೆ ಕಾರಣ ಹಣದ ದಾಹವೂ ಆಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದೆಲ್ಲ ಏನೇ ಇರಲಿ, ಪ್ರೀತಿಗೆ ಯಾವುದೂ ಕೌಂಟ್ ಆಗಲ್ಲ ಎನ್ನುವಂತೆ ಈ ಜೋಡಿ ಹಸೆಮಣೆ ತುಳಿದಿದ್ದಾರೆ.

Live Tv

Leave a Reply

Your email address will not be published.

Back to top button