ಬೆಂಗಳೂರು: ಲಿಪ್‍ಲಾಕ್ ಅಂದರೆ ಏನು? ಈ ಪದವೇ ನನಗಿಷ್ಟವಾಗಲಿಲ್ಲ ಎಂದು ಟಾಲಿವುಡ್ ನಟ ವಿಜಯ್ ದೇವರಕೊಂಡ ಹೇಳಿದ್ದಾರೆ.
ನಗರದಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರತಂಡ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸ್ಸಿಂಗ್ ಒಂದು ಭಾವಾತ್ಮಕ ಅಂಶ. ಅದಕ್ಕೆ ಬೆಲೆ ಕೊಡಬೇಕು. ಅಳುವುದು, ಕೋಪ ವ್ಯಕ್ತಪಡಿಸುವುದು, ಪ್ರೀತಿಯಿಂದ ಚುಂಬಿಸುವುದು ಇದೆಲ್ಲಾ ಭಾವನೆಗಳು. ಇದು ಲಿಪ್ಸ್ ಲಾಕಿಂಗ್ ಅಲ್ಲ. ಈ ಪದ ಕೇಳಿದಾಗ ನನಗೆ ಬೇಜಾರಾಗುತ್ತದೆ. ಈಗಲೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಿಸ್ಸಿಂಗ್ ಎಂದೇ ಭಾವಿಸುತ್ತಾರೆ. ಅದು ಆ ಪಾತ್ರಗಳು ಎಂದುಕೊಳ್ಳುವುದಿಲ್ಲ. ಪಾತ್ರಗಳನ್ನು ಪಾತ್ರಗಳ ರೀತಿ ನೋಡಿ. ನಿಜ ಜೀವನಕ್ಕೆ ಹೋಲಿಸಬೇಡಿ ಎಂದು ಮನವಿ ಮಾಡಿಕೊಂಡರು.
Advertisement
Advertisement
ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಜನರು ನನ್ನನ್ನು ನೋಡಿ ಭಯಬಿದ್ದರು. ಆ ಸಿನಿಮಾದಲ್ಲಿ ನನ್ನ ಪಾತ್ರ ಹಾಗಿತ್ತು. ನಿಜ ಜೀವನದಲ್ಲಿ ನಾನು ಸಿಗರೇಟ್ ಕೂಡ ಸೇದುವುದಿಲ್ಲ. ಪಾತ್ರಕ್ಕೆ ತಕ್ಕಂತೆ ನಾನು ನಟಿಸಿದ್ದೇನೆ. ಹೀಗಾಗಿ ಕಿಸ್ಸಿಂಗ್ ಸೀನ್ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
Advertisement
ಈ ವೇಳೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ಇದೊಂದು ಭಿನ್ನವಾದ ವಿಷಯಾಧಾರಿತ ಸಿನಿಮಾ. ಎಲ್ಲಾ ರೀತಿಯ ಭಾವನೆಗಳು ಡಿಯರ್ ಕಾಮ್ರೆಡ್ ಸಿನಿಮಾದಲ್ಲಿವೆ. ಆದರೂ ಕಿಸ್ಸಿಂಗ್ ಸೀನ್ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಸಿನಿಮಾದಲ್ಲಿರುವ ಭಾವನಾತ್ಮಕ ಅಂಶಗಳಲ್ಲಿ ಕಿಸ್ಸಿಂಗ್ ಸೀನ್ ಕೂಡ ಒಂದು ಎಂದು ಹೇಳಿದರು.
Advertisement
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ‘ಡಿಯರ್ ಕಾಮ್ರೆಡ್’ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಡಿಯರ್ ಕಾಮ್ರೆಡ್ ದಕ್ಷಿಣ ಭಾರತದಲ್ಲಿ ಭಾರೀ ಸದ್ದು ಮಾಡಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.