ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

Advertisements

ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಲಿಲ್ಲ ಎನ್ನುವುದು ನಾನಾ ರೂಪ ಪಡೆದುಕೊಳ್ಳುತ್ತಿದೆ. ವಿಜಯ್ ದೇವರಕೊಂಡ ಜತೆಗೆ ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ನಿಜವೂ ಆಗಿದ್ದರೂ, ಅವರ ಲವ್ ಬ್ರೇಕ್ ಅಪ್ ಆಯಿತಾ ಎನ್ನುವ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಅವರಿಬ್ಬರೂ ಪ್ರೀತಿಸುತ್ತಿರುವ ವಿಚಾರ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ, ಅವರ ನಡೆಗಳು ಹಾಗೆಯೇ ಇದ್ದವು ಅನ್ನುವ ಕಾರಣಕ್ಕಾಗಿ ಇಂಥದ್ದೊಂದು ಸುದ್ದಿ ಹುಟ್ಟುಕೊಂಡಿದ್ದು ಸುಳ್ಳಲ್ಲ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

Advertisements

ವಿಜಯ್ ದೇವರಕೊಂಡ ವೃತ್ತಿ ಬದುಕಿನಲ್ಲಿ ಅಚ್ಚರಿಗಳು ಆದಾಗೊಮ್ಮೆ ರಶ್ಮಿಕಾ ಅದಕ್ಕೆ ಸಾಕ್ಷಿಯಾಗಿರುತ್ತಿದ್ದರು. ಹೊಸ ವರ್ಷವನ್ನು ಈ ಜೋಡಿ ಗೋವಾದಲ್ಲಿ ಕಳೆದಿತ್ತು. ಪ್ರತಿ ವರ್ಷವೂ ಹುಟ್ಟು ಹಬ್ಬಕ್ಕೆ ‘ರನ್ನ ಚಿನ್ನ’ ಎಂದೆಲ್ಲ ಹಾಡಿಹೊಗಳುತ್ತಿದ್ದರು. ಒಬ್ಬರಿಗೊಬ್ಬರು ಕಾಲೆಳೆದುಕೊಂಡು, ತಮಾಷೆ ಮಾಡಿಕೊಂಡೇ ಇರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಗಪ್ ಚುಪ್. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

Advertisements

ತೆಲುಗು ಸಿನಿಮಾ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಸಾಲೆ ಸುದ್ದಿ ಎಂದರೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿದೆಯಂತೆ. ಅದಕ್ಕೆ ಕಾರಣ ಬಾಲಿವುಡ್ ನಟಿ ಅನನ್ಯ ಪಾಂಡೆ ಎನ್ನುವುದು ಹೊಸ ಸುದ್ದಿ. ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಇದೀಗ ಲೈಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಈ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ವಿಜಯ್ ದೇವರಕೊಂಡ ಜತೆ ಹೆಚ್ಚೆಚ್ಚು ಅನನ್ಯ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರವೇ ರಶ್ಮಿಕಾ ದೂರ ಆಗುವುದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

Advertisements

ವಿಜಯ್ ದೇವರಕೊಂಡ ಅವರಿಂದ ಈ ಕಡೆ ರಶ್ಮಿಕಾ ದೂರವಾಗಿದ್ದರೆ, ಆ ಕಡೆ ಅನನ್ಯ ಪಾಂಡೆ ತಾವು ಪ್ರೀತಿಸುತ್ತಿದ್ದ ಇಶಾನ್ ಕಟ್ಟರ್ ಗೆ ಕೈ ಕೊಟ್ಟಿದ್ದು ಕಾಕತಾಳೀಯ ಅಲ್ಲವೆಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡಗಾಗಿಯೇ ಅನನ್ಯ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದಾರೆ ಎನ್ನುವ ಗುಟ್ಟು ರಟ್ಟಾಗಿದೆ. ಇವೆಲ್ಲವನ್ನೂ ಅರಿತ ರಶ್ಮಿಕಾ ಅವರು ವಿಜಯ್ ಅವರಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ ಎನ್ನುವುದು ಒಂದು ಹಂತದ ಲೆಕ್ಕಾಚಾರ.

ಅಷ್ಟಕ್ಕೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡು ಪ್ರೀತಿಸುತ್ತಿದ್ದರಾ ಎನ್ನುವುದಕ್ಕೆ ಅಧಿಕೃತವಾಗಿ ಯಾವುದೇ ದಾಖಲೆಗಳು ಇಲ್ಲ. ಇಂಥದ್ದೊಂದು ಪ್ರಶ್ನೆ ಇಬ್ಬರಿಗೂ ಎದುರಾದಾಗಲೂ ಅದನ್ನು ನಿರಾಕರಿಸುತ್ತಲೇ ಬಂದಿದೆ ಈ ಜೋಡಿ. ಇದೀಗ  ಈ ಜೋಡಿಯ ಸ್ನೇಹಕ್ಕೆ ಮತ್ತಷ್ಟು ರಂಗು ತುಂಬಲು ಅನನ್ಯ ಪಾಂಡೆ ಹೊಸ ಸೇರ್ಪಡೆ ಆಗಿದ್ದಾರವಷ್ಟೆ.

Advertisements
Exit mobile version