BollywoodCinemaDistrictsKarnatakaLatestMain Post

ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

ಬಾಲಿವುಡ್ ನ ಅತ್ಯಂತ ಹ್ಯಾಪಿ ಕಪಲ್ ಅನಿಸಿಕೊಂಡಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮಗು ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ. ಹಾಗಂತ ರಣವೀರ್ ಸಿಂಗ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮದುವೆಯಾಗಿ ಮೂರು ವರ್ಷಗಳ ನಂತರ ಇಂಥದ್ದೊಂದು  ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ನವೆಂಬರ್ 14ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಮ್ಮ ಕೆರಿಯರ್ ಅತ್ತ ಗಮನ ಕೊಟ್ಟಿದ್ದರು. ಇದೀಗ ಅವರು ಕುಟುಂಬವನ್ನು ವಿಸ್ತಾರ ಮಾಡಿಕೊಳ್ಳುವ ಕುರಿತು ಆಲೋಚನೆ ಮಾಡಿದ್ದಾರಂತೆ. ಸರಿಯಾದ ಸಮಯಕ್ಕೆ ಮದುವೆಯಾಗಿ ಸರಿಯಾದ ವೇಳೆಯಲ್ಲೇ ಮಗು ಮಾಡಿಕೊಳ್ಳಲು ನಾವು ಮಾತುಕತೆ ಮಾಡಿದ್ದೇವೆ ಎಂದು ರಣವೀರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

ದೀಪಿಕಾ ಬಗ್ಗೆ ರಣವೀರ್ ಗೆ ಅಪಾರ ಹೆಮ್ಮೆಯಂತೆ. ಅವರ ವೃತ್ತಿ ಬದ್ಧತೆ, ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಮತ್ತು ಒಬ್ಬರಿಗೊಬ್ಬರು ಗೌರವಕೊಟ್ಟುಕೊಂಡು ಬದುಕುತ್ತಿರುವ ರೀತಿಯ ಬಗ್ಗೆ ರಣವೀರ್ ಹೆಮ್ಮೆಯಿಂದ ಮಾತನಾಡಿದ್ದಾರೆ. ಪತ್ನಿ ದೀಪಿಕಾ ಎಲ್ಲ ರೀತಿಯಲ್ಲೂ ಪ್ರತಿಭಾವಂತೆ. ಪ್ರತಿ ಬಾರಿಯೂ ಹೊಸದನ್ನು ಕಲಿಯುವುದಕ್ಕೆ ಅವರು ಪ್ರೇರಕ ಎಂದು ಪತ್ನಿಯ ಬಗ್ಗೆ ಹೊಗಳಿದ್ದಾರೆ ರಣವೀರ್. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

ಸದ್ಯ ರಣವೀರ್ ಸರ್ಕಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜತೆಗೆ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಚಿತ್ರದಲ್ಲಿ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿದ್ದು ಕರಣ್ ಜೋಹಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

Leave a Reply

Your email address will not be published.

Back to top button