ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಲೈಗರ್ ಪೋಸ್ಟರ್ ರಿವೀಲ್ ಆಗಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ `ಲೈಗರ್’ ಚಿತ್ರದಲ್ಲಿನ ವಿಜಯ್ ದೇವರಕೊಂಡ ಅರೆ ನಗ್ನ ಲುಕ್ಕಿಗೆ ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ.
View this post on Instagram
ಪುರಿ ಜಗನ್ನಾಥ್ ನಿರ್ದೇಶನದ `ಲೈಗರ್’ ರಿಲೀಸ್‌ಗೂ ಮುಂಚೆನೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ನಿನ್ನೇಯಷ್ಟೇ ಲೈಗರ್ ಚಿತ್ರದ ವಿಜಯ್ ದೇವರಕೊಂಡ ಲುಕ್ ರಿವೀಲ್ ಆಗಿ ಮೆಚ್ಚುಗೆ ಮಹಾಪೂರವೇ ಹರಿಬಂದಿತ್ತು. ಬಟ್ಟೆಯಿಲ್ಲದೇ ರೋಸ್ ಹಿಡಿದು ಬಂದ ಲೈಗರ್ ವಿಜಯ್ ಲುಕ್ ನೋಡಿ ನೆಟ್ಟಿಗರು ಫುಲ್ ಟ್ರೋಲ್ ಮಾಡಿದ್ದಾರೆ. ಬಳಿಕ ಪೋಸ್ಟರ್ ಅನ್ನ ಮರುಸೃಷ್ಟಿ ಮಾಡಿ ವೈರಲ್ ಮಾಡ್ತಿದ್ದಾರೆ.
ಲೈಗರ್ ಸಿನಿಮಾ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ಸಂಪೂರ್ಣ ವಿವಸ್ತ್ರವಾಗಿ, ಕೈಯಲ್ಲಿ ರೋಸ್ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಇದೆ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಲುಕ್ ಮರುಸೃಷ್ಠಿ ಮಾಡಲಾಗಿದೆ. ತಮಗೆ ಇಷ್ಟ ಬಂದ ಉಡುಗೆಗಳನ್ನು ಪೋಸ್ಟರ್‌ಗೆ ಜೋಡಿಸಿ ಹರಿ ಬಿಡುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಬೆತ್ತಲೆ ಚಿತ್ರಕ್ಕೆ ಭಾರತದಾದ್ಯಂತ ತಾಪಮಾನ ಹೆಚ್ಚಿದೆ ಎಂದ ನಟಿ ಅನನ್ಯ ಪಾಂಡೆ
View this post on Instagram
ಕೆಲವು ಪೋಸ್ಟರ್‌ಗಳಲ್ಲಿ ಪ್ಯಾಟ್ ತೊಡಿಸಿದರೆ ಮತ್ತೆ ಕೆಲವು ಪೋಸ್ಟರ್‌ಗಳಲ್ಲಿ ಪ್ಯಾಂಟು, ಶರ್ಟ್ ಎರಡನ್ನೂ ತೊಡಿಸಲಾಗಿದೆ. ಬೇರೊಂದು ಪೋಸ್ಟರ್‌ನಲ್ಲಿ ನಟ ಬಾಲಯ್ಯ ವಿಜಯ್ ಶಾಲು ಹೊದಿಸುತ್ತಿರುವ ಹಾಗೇ ಮರುಸೃಷ್ಟಿ ಮಾಡಿ ಹರಿಬಿಟ್ಟಿದ್ದಾರೆ. ಒಟ್ನಲ್ಲಿ ಲೈಗರ್ ಹೊಸ ಲುಕ್ ಈಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.
Live Tv