ಟಾಲಿವುಡ್‌ನ ರೊಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಮಹಿಳಾ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆಗುವಂತಹ ನ್ಯೂಸ್ ಕೊಟ್ಟಿದ್ದಾರೆ. ತನ್ನ ಕೈ ಹಿಡಿದಿರುವ ಮನದನ್ನೆ ಫೋಟೋ ಹಂಚಿಕೊಂಡು ಸದ್ಯದಲ್ಲೇ ಅನೌನ್ಸ್ ಆಗುತ್ತೆ ಎಂದಿದ್ದಾರೆ ವಿಜಯ್. ಈ ಮೂಲಕ ತನ್ನ ಲವ್ ಲೈಫ್ ಬಗ್ಗೆ ವಿಜಯ್ ಸುಳಿವು ನೀಡಿದ್ದಾರೆ. ಹಾಗಾದ್ರೆ ಆ ಹುಡುಗಿ (Girl) ಯಾರು?
ವಿಜಯ್ ದೇವರಕೊಂಡ ಟಾಲಿವುಡ್‌ನ ಬೋಲ್ಡ್ ಹೀರೋ ತನಗನಿಸಿದ್ದನ್ನು ನೇರವಾಗಿ ಹೇಳುವ ನಟ. ವಿಜಯ್ ಒಪ್ಪಿಕೊಳ್ಳುವ ಸಿನಿಮಾಗಳು ಕೂಡ ಅಷ್ಟೇ ಬೋಲ್ಡ್ ಆಗಿರುತ್ತೆ. ನಿನ್ನೆ ರಾತ್ರಿ (ಆಗಸ್ಟ್ 29) ವಿಜಯ್ ದೇವರಕೊಂಡ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹುಡುಗಿಯ ಕೈ ಮೇಲೆ ತನ್ನ ಕೈ ಇಟ್ಟಿದ್ದ ಫೋಟೊವನ್ನು ಶೇರ್ ಮಾಡಿದ್ದರು. ಈ ಫೋಟೊ ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ ವಿಜಯ್ ದೇವರಕೊಂಡ ಬರೆದುಕೊಂಡ ಸಾಲುಗಳು ಅಷ್ಟೇ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಶಾರುಖ್ ‘ಜವಾನ್ʼ ಕಾಳಗಕ್ಕೆ ಯಶ್- ಪೃಥ್ವಿರಾಜ್ ಸುಕುಮಾರನ್ ಸಾಥ್
ಏನೋನೋ ನಡೆಯುತ್ತಿದೆ. ಆದರೆ, ಇದು ಮಾತ್ರ ನಿಜಕ್ಕೂ ವಿಶೇಷ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಶೇರ್ ಆಗ್ತಿದ್ದಂತೆ ವಿಜಯ್, ಮದುವೆ (Wedding) ಬಗ್ಗೆ ಅನೌನ್ಸ್ ಮಾಡಬಹುದಾ? ಎಂದು ಲೆಕ್ಕಚಾರ ಹಾಕ್ತಿದ್ದಾರೆ. ಇತ್ತೀಚಿಗೆ ಸಮಂತಾ ಜೊತೆ ಕೂಡ ವಿಜಯ್ ಒಡನಾಟ ಚೆನ್ನಾಗಿರುವ ಕಾರಣ, ವಿಜಯ್ ಕೈ ಮೇಲಿರುವ ಆ ಕೈ ರಶ್ಮಿಕಾ ಮಂದಣ್ಣ ಅವರದ್ದಾ? (Rashmika Mandanna) ಅಥವಾ ಸಮಂತಾನಾ (Samantha) ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಎಲ್ಲದಕ್ಕೂ ವಿಜಯ್ ದೇವರಕೊಂಡ ಉತ್ತರ ನೀಡುವವರೆಗೂ ಕಾಯಬೇಕಿದೆ.
ಅಸಲಿಗೆ ಇದು, ವಿಜಯ್ ಮದುವೆ ಮ್ಯಾಟರ್ ಅಲ್ಲ, ‘ಗೀತಾ ಗೋವಿಂದಂ’ (Geetha Govindam) ನಿರ್ದೇಶಕ, ರಶ್ಮಿಕಾ ಜೊತೆಗಿನ ಹೊಸ ಸಿನಿಮಾದ ಅನೌನ್ಸ್‌ಮೆಂಟ್ ವಿಚಾರ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]