BollywoodCinemaLatestMain PostSouth cinema

ʻಲೈಗರ್ʼ ಸಿನಿಮಾ ಸೋತರೂ ವಿಜಯ್ ದೇವರಕೊಂಡಗೆ ಬಂಪರ್ ಆಫರ್

ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ. `ಲೈಗರ್’ (Liger) ಸಿನಿಮಾಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಈ ಚಿತ್ರದ ನಂತರ ವಿಜಯ್ ದೇವರಕೊಂಡ (Vijay Devarakonda) ಅವರಿಗೆ ಅವಕಾಶ ಕಮ್ಮಿ ಆಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಭರ್ಜರಿ ಆಫರ್ಸ್ ವಿಜಯ್ ಅರಸಿ ಬರುತ್ತಿದೆ.

vijaydevarakonda

`ಲೈಗರ್’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ವಿಜಯ್ ದೇವರಕೊಂಡ ಅದೃಷ್ಟ ಪರೀಕ್ಷೆಗಿಳಿದ್ದರು. ಆದರೆ ಅವರಿಗೆ ಅದೃಷ್ಟ ಕೈ ಕೊಟ್ಟಿತ್ತು. ಇನ್ನು ವಿಜಯ್, ಪುರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಮೂಡ ಬರಲಿರುವ `ಜನ ಗಣ ಮನ’ ಚಿತ್ರ ಕೂಡ ನಿಂತಿದೆ. ಆದರೆ ವಿಜಯ್ ದೇವರಕೊಂಡ ಅವರಿಗೆ ಡಿಮ್ಯಾಂಡ್ ಏನು ಕಮ್ಮಿಯಾಗಿಲ್ಲ. ಅವರ ಜತೆ ಸಿನಿಮಾ ಖ್ಯಾತ ನಿರ್ಮಾಪಕರೊಬ್ಬರು  ಮುಂದಾಗಿದ್ದಾರೆ. ಇದನ್ನೂ ಓದಿ:ಪ್ರಭಾಸ್ ದೊಡ್ಡಪ್ಪ, ತೆಲುಗಿನ ಹಿರಿಯ ನಟ ಕೃಷ್ಣಂರಾಜು ನಿಧನ

ವಿಜಯ್ ದೇವರಕೊಂಡ ಮತ್ತು ನಿರ್ಮಾಪಕ ದಿಲ್ ರಾಜು (Dil Raju) ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಮೂಡಿ ಬರಲಿದೆಯಂತೆ. ʻಲೈಗರ್ʼ ಸಿನಿಮಾ ಸೋತರೂ ಕೂಡ ತಮ್ಮ ಚಿತ್ರಕ್ಕೆ ವಿಜಯ್ ಅವರೇ ಬೇಕು ಅಂತಾ ದಿಲ್ ರಾಜು ಅಡ್ವಾನ್ಸ್ ಕೂಡ ಕೊಟ್ಟಿದ್ದಾರೆ.

ಇದೀಗ ವಿಜಯ್ ನಟಿಸಿದ ಸತತ ಸಿನಿಮಾಗಳು ಸೋಲುತ್ತಿರುವ ಕಾರಣ ಕಥೆಯಲ್ಲಿ ಬದಲಾವಣೆ ತರಲು ಯೋಚಿಸಿದ್ದಾರೆ. ಈ ಹೊಸ ಚಿತ್ರಕ್ಕೆ ಇಂದ್ರಗAಟಿ ಮೋಹನ್ ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ತಂಡದ ಸ್ಟೋರಿ ಲೈನ್ ಕೇಳಿ ದೇವರಕೊಂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ. ಹಾಗೆಯೇ ಶೂಟಿಂಗ್ ಕೂಡ ಶುರುವಾಗಲಿದೆ.

Live Tv

Leave a Reply

Your email address will not be published.

Back to top button